ಗಡಿಯಲ್ಲಿ ಹಿಂಸಾಚಾರ:ಐವರು ಪೊಲೀಸರು ಸಾವು
ಗುವಾಹಟಿ, ಜು. ೨೭: ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ರಾಜ್ಯದ ಗಡಿ ವಿವಾದಕ್ಕೆ ಸಂಬAಧಿಸಿದAತೆ ಹಿಂಸಾಚಾರ ನಡೆದಿದ್ದು, ಹಿಂಸಾಚಾರದಲ್ಲಿ ಐವರು ಪೊಲೀಸರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದಾರೆ. ಪೊಲೀಸರು, ನಾಗರಿಕರ ಸಾವಿಗೆ ಮಂಗಳವಾರ ತೀವ್ರ ಸಂತಾಪ ಸೂಚಿಸಿರುವ ಅಸ್ಸಾಂ ಸರ್ಕಾರ ರಾಜ್ಯದಾದ್ಯಂತ ೩ ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ. ಅಸ್ಸಾಂ ಮತ್ತು ಮಿಜೋರಾಂ ನಡುವಣ ಗಡಿ ಸಂಘರ್ಷದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ೬೦ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಸಂಬAಧ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊAದಿಗೆ ಮಾತುಕತೆ ನಡೆಸಿದ್ದು, ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಪ್ರತಿಪಕ್ಷಗಳ ವರ್ತನೆ ಬಹಿರಂಗಪಡಿಸಲು ಪ್ರಧಾನಿ ಸೂಚನೆ
ನವದೆಹಲಿ, ಜು. ೨೭: ಸಂಸತ್ ಚಳಿಗಾಲದ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷ ಸದಸ್ಯರ ವರ್ತನೆಯನ್ನು ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮೂಲಕ ಬಹಿರಂಗಪಡಿಸಬೇಕು ಎಂದು ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ. ಈ ತಿಂಗಳ ೧೯ ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಪೆಗಾಸಸ್ ಫೋನ್ ಕದ್ದಾಲಿಕೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಇನ್ನಿತರ ವಿಷಯಗಳನ್ನು ಪ್ರಸ್ತಾಪಿಸಿ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಎಬ್ಬಿಸುತ್ತಿರುವ ಪ್ರತಿಪಕ್ಷಗಳನ್ನು ಪ್ರಧಾನಿ ಮೋದಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸದನದ ಅಮೂಲ್ಯ ಸಮಯವನ್ನು ಹಾಳುಮಾಡುವುದು ಕಾಂಗ್ರೆಸ್ ಉದ್ದೇಶವಾಗಿದೆ. ಹೀಗಾಗಿ ಸದನದಲ್ಲಿ ಸುಗಮ ಕಲಾಪಕ್ಕೆ ಅವಕಾಶ ಕೊಟ್ಟಿಲ್ಲ ಎಂದು ದೂರಿದರು. ದೇಶದಲ್ಲಿನ ಕೋವಿಡ್-೧೯ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲು ಕರೆಯಲಾಗಿದ್ದ ಸರ್ವ ಪಕ್ಷಗಳ ಸಭೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದೆ ಎಂದು ಆರೋಪಿಸಿದರು. ಸದನದಲ್ಲಿ ನೂತನ ಸಚಿವರನ್ನು ಪರಿಚಯ ಮಾಡಿಕೊಂಡ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಇತರ ಸದಸ್ಯರು ಅಡ್ಡಿಪಡಿಸಿದ್ದಾರೆ, ಇದು ದೇಶದ ಜನರು ಮತ್ತು ಮಾಧ್ಯಮಗಳ ಮಂದೆ ಪ್ರತಿಪಕ್ಷಗಳ ವರ್ತನೆ ಬಹಿರಂಗವಾಗಿದೆ ಎಂದು ಕಿಡಿಕಾರಿದರು.
ಪುರುಷರ ಹಾಕಿ - ಭಾರತಕ್ಕೆ ಜಯ
ಟೋಕಿಯೋ, ಜು. ೨೭: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ೩-೦ ಅಂತರದ ಭರ್ಜರಿ ಜಯ ಸಾಧಿಸಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ನಡೆದ ಪೂಲ್ ಎ ಹಣಾಹಣಿಯಲ್ಲಿ ಸ್ಪೇನ್ ತಂಡವನ್ನು ಭಾರತ ತಂಡ ೩-೦ ಗೋಲುಗಳಿಂದ ಸೋಲಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದು, ಮುಂದಿನ ಗ್ರೂಪ್ ಸ್ಟೇಜ್ ಹಣಾಹಣಿಯಲ್ಲಿ ಅರ್ಜೆಂಟಿನಾ ಮತ್ತು ಜಪಾನ್ ತಂಡಗಳನ್ನು ಎದುರಿಸಲಿದೆ.
ಆಸ್ಕರ್ ಫೆರ್ನಾಂಡಿಸ್ಗೆ ಶಸ್ತçಚಿಕಿತ್ಸೆ
ಮಂಗಳೂರು, ಜು. ೨೭: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಶಸ್ತçಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಯೆನೆಪೊಯ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಶಸ್ತçಚಿಕಿತ್ಸೆಗೆ ಒಳಗಾಗಿದ್ದು, ಡಯಾಲಿಸಿಸ್ಗೂ ಒಳಗಾದರು. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ಮಂಗಳವಾರ ಹೇಳಿದ್ದಾರೆ. ಶಸ್ತçಚಿಕಿತ್ಸೆಯ ನಂತರ ಅವರ ಮೆದುಳಿನಲ್ಲಿನ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲಾಗಿದೆ. ಸೋಮವಾರ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾದ ಫಾ. ಮ್ಯಾಥ್ಯೂ ವಾಸ್ ಮತ್ತು ಬಾಂಡೆಲ್ ಚರ್ಚ್ ಪ್ರೀಸ್ಟ್ ಫ್ರಾ. ಮತ್ತು ಇತರ ಕುಟುಂಬ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಕರ್ ಫರ್ನಾಂಡಿಸ್ ತಮ್ಮ ಮನೆಯಲ್ಲಿ ಯೋಗ ಮಾಡುವಾಗ ಕೆಳಗೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿಯ ಬಗ್ಗೆ ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಫೆನ್ಸಿಂಗ್ ಪಟು ಭವಾನಿ ದೇವಿ ಬೆಂಬಲಕ್ಕೆ ನಿಂತ ಪ್ರಧಾನಿ
ನವದೆಹಲಿ, ಜು. ೨೭: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಪರ ಫೆನ್ಸಿಂಗ್ನಲ್ಲಿ ಪೈಪೋಟಿ ನಡೆಸಿದ್ದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ ಭವಾನಿ ದೇವಿ, ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ಕ್ರಮಾಂಕದ ಮನೂನ್ ಬ್ರೂನೆಟ್ ವಿರುದ್ಧ ೭-೧೫ ರಿಂದ ಸೋತು ಅಭಿಯಾನ ಅಂತ್ಯ ಗೊಳಿಸಿದ್ದರು. ಈ ಹಿನ್ನೆಲೆ ಸಾಮಾಜಿಕ ಮಾಧ್ಯಮದಲ್ಲಿ ಆಕೆ ದೇಶದ ಕ್ಷಮೆ ಯಾಚಿಸಿದ್ದಾರೆ. ನನ್ನ ಶಕ್ತಿ ಮೀರಿ ಪ್ರಯತ್ನಿಸಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ. ಪ್ರತಿಯೊಂದು ಅಂತ್ಯವೂ ಒಂದು ಆರಂಭವಾಗಿದೆ. ತರಬೇತಿ ಮುಂದುವರಿಸುತ್ತೇನೆ. ೨೦೨೪ ರ ಒಲಿಂಪಿಕ್ಸ್ ಗುರಿಯೊಂದಿಗೆ ಮುಂದುವರಿಯುತ್ತೇನೆೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭವಾನಿ ದೇವಿ ಅವರ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆಯ ಟ್ವೀಟ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ್ದಾರೆ. ಶಕ್ತಿ ಮೀರಿ ಹೋರಾಟ ನಡೆಸಿದ್ದೀರಿ ಎಂದು ಟ್ವಿಟರ್ನಲ್ಲಿ ಪ್ರಶಂಸಿಸಿದ್ದಾರೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಡಿದ್ದೀರಿ ನಮಗದೇ ಮುಖ್ಯ. ಗೆಲುವು-ಸೋಲು ಜೀವನದ ಒಂದು ಭಾಗ ಎಂದು ಪ್ರಧಾನಿ ಹೇಳಿದ್ದಾರೆ. ನಿಮ್ಮ ಸೇವೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ನಮ್ಮ ದೇಶದ ಎಲ್ಲ ನಾಗರಿಕರಿಗೆ ನೀವು ಸ್ಫೂರ್ತಿಯಾಗಲಿದ್ದೀರಿ ಎಂದು ಪ್ರಧಾನಿ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ತಮಿಳುನಾಡಿನ ಚಂದಲವಾಡ ಆನಂದ ಸುಂದರಮನ್ ಭವಾನಿ ದೇವಿ ತಮ್ಮ ಮೊದಲ ಒಲಿಂಪಿಕ್ಸ್ನಲ್ಲಿ ಸ್ಫ್ಪೂರ್ತಿದಾಯಕ ಪ್ರದರ್ಶನ ನೀಡಿದರು. ಮೊದಲ ಸುತ್ತಿನಲ್ಲಿ ಟ್ಯೂನಿಷಿಯಾದ ನಾದಿಯಾ ಬೆನ್ ಅಜೀಜ್ ವಿರುದ್ದ ೧೫-೩ ರಿಂದ ಜಯಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಒಲಿಂಪಿಕ್ಸ್ ಫೆನ್ಸಿಂಗ್ನ ಒಂದು ಪಂದ್ಯವನ್ನು ಗೆದ್ದ ಮೊದಲ ಭಾರತೀಯೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
ಅಚ್ಚರಿ ಮೂಡಿಸಿದ ಉತ್ತರ-ದಕ್ಷಿಣ ಕೊರಿಯಾ ಮಾತುಕತೆ
ಸಿಯೋಲ್, ಜು. ೨೭: ಬದ್ಧದ್ವೇಷಿಗಳಂತಿದ್ದ ಉತ್ತರ-ದಕ್ಷಿಣ ಕೊರಿಯಾಗಳು ಅಚ್ಚರಿಯ ರೀತಿಯಲ್ಲಿ ಮಾತುಕತೆಯನ್ನು ಪುನಾರಂಭ ಮಾಡಿವೆ. ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನಾರಂಭ ಮಾಡಲು ನಿರ್ಧರಿಸಿರುವುದನ್ನು ಉಭಯ ದೇಶಗಳ ನಾಯಕರು ತಾ. ೨೭ ರಂದು ಘೋಷಿಸಿದ್ದಾರೆ. ಕೊರಿಯಾ ಯುದ್ಧ ಅಂತ್ಯಗೊAಡ ದಿನದ ವಾರ್ಷಿಕ ನೆನಪಿನ ದಿನದಂದೇ ಈ ಘೋಷಣೆಯಾಗಿರುವುದು ಅಚ್ಚರಿ ಮೂಡಿಸಿದೆ. ೨೦೧೮ ರಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಉತ್ತರ ಕೊರಿಯಾ-ದಕ್ಷಿಣ ಕೊರಿಯಾದ ಅಧ್ಯಕ್ಷರುಗಳಾದ ಕಿಮ್ ಜಾಂಗ್ ಉನ್ ಹಾಗೂ ಮೂನ್ ಜೇ-ಇನ್ ಐತಿಹಾಸಿಕ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ನೀಡಿದ್ದರು. ಆದರೆ ಮಹತ್ತರ ವಾದದ್ದನ್ನು ಸಾಧಿಸಲು ವಿಫಲರಾಗಿ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿತ್ತು.
ಉದ್ಯಮಿ ವಿಜಯ್ ಮಲ್ಯ ದಿವಾಳಿ : ಬ್ರಿಟನ್ ನ್ಯಾಯಾಲಯ
ಲಂಡನ್, ಜು. ೨೭: ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಿದೆ. ಇದು ಕಾರ್ಯನಿರ್ವಹಿಸದ ಕಿಂಗ್ ಫಿಶರ್ ಏರ್ಲೈನ್ಸ್ಗೆ ಸಾಲ ನೀಡಿ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎದುರು ನೋಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದ ಹಾದಿಯನ್ನು ಸುಗಮಗೊಳಿಸಿದೆ. ಯುಕೆ ಸಮಯ ೧೫.೪೨ ರಂತೆ, ಲಂಡನ್ ಹೈಕೋರ್ಟ್ ಚಾನ್ಸರಿ ವಿಭಾಗದ ವರ್ಚುಯಲ್ ವಿಚಾರಣೆ ವೇಳೆಯಲ್ಲಿ ವಿಜಯ್ ಮಲ್ಯ ದಿವಾಳಿಯೆಂದು ಐಸಿಸಿ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ತೀರ್ಪಿನಲ್ಲಿ ಹೇಳಿದ್ದಾರೆ. ಕಾನೂನು ಸಂಸ್ಥೆಗಳಾದ ಟಿಎಲ್ಟಿ ಎಲ್ಎಲ್ಪಿ ಮತ್ತು ನ್ಯಾಯವಾದಿ ಮಾರ್ಸಿಯಾ ಶೆಕರ್ಡೆಮಿಯನ್ ಪ್ರತಿನಿಧಿಸುವ ಭಾರತೀಯ ಬ್ಯಾಂಕುಗಳು ದಿವಾಳಿತನದ ಆದೇಶವನ್ನು ಭಾರತೀಯ ಬ್ಯಾಂಕುಗಳ ಪರವಾಗಿ ನೀಡಬೇಕೆಂದು ವಾದಿಸಿದ್ದರು. ಮಲ್ಯ ಪರ ವಕೀಲ ನ್ಯಾಯವಾದಿ, ಫಿಲಿಪ್ ಮಾರ್ಷಲ್, ಭಾರತೀಯ ನ್ಯಾಯಾಲಯಗಳಲ್ಲಿ ಕಾನೂನು ಸವಾಲುಗಳು ಮುಂದುವರೆದಿರುವಾಗ, ತಡೆಯಾಜ್ಞೆ ಮತ್ತು ಆದೇಶವನ್ನು ಮುಂದೂಡಬೇಕೆAದು ಕೋರಿದರು.