ಕೂಡಿಗೆ, ಜು. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸಮೀಪದ ನವಗ್ರಾಮದ ಪ್ರಕಾಶ್ ಎಂಬವರ ಮನೆಯ ಗೋಡೆಗಳು ಅತಿಯಾದ ಮಳೆಗೆ ಕುಸಿದು ಭಾರೀ ನಷ್ಟವಾಗಿದೆ. * ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ನಿವಾಸಿಯಾದ ಪಾತಿ ವಿಜಯ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿತಗೊಂಡು ನಷ್ಟ ಸಂಭವಿಸಿದೆ.

ಗ್ರಾಮ ಸದಸ್ಯೆ ಜಯಶ್ರೀ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಲೆಕ್ಕಾಧಿಕಾರಿ ಗುರುದರ್ಶನ್ ಸಿಬ್ಬಂದಿಗಳಾದ ಅನಿಲ್ ಬಾಪು, ಶಶಿಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.