ಸುಂಟಿಕೊಪ್ಪ, ಜು. ೨೭: ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿತರಾದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ನೋಂದಾಯಿತರಾದ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ೫೦ ಆಹಾರ ಕಿಟ್ ಹಾಗೂ ಸುರಕ್ಷಾ ಕಿಟ್ಅನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು.
ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಳ್ಳುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತುಕೊಡುವ ನಿಟ್ಟಿನಲ್ಲಿ ಶಾಲಾ ಶುಲ್ಕದ ವೆಚ್ಚವನ್ನು ಭರಿಸುತ್ತಿದೆ ಕೆಲಸದ ಸಂದರ್ಭದಲ್ಲಿ ಬಿದ್ದು ಅಂಗವೈಕಲ್ಯತೆಗೊAಡರೆ ಮಾಸಿಕ ೨ ಸಾವಿರ ರೂಪಾಯಿ ತನಕ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ ೨,೦೦,೦೦೦ವರೆಗೆ ಅನುಗ್ರಹ ರಾಶಿ ಸಹಾಯಧನ ದೊರೆಯಲಿದೆ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸಂಘದ ಸದಸ್ಯತ್ವ ಹೊಂದಿಕೊಳ್ಳಬೇಕು ಕೊರೊನಾ ಸಂದರ್ಭ ಆರೋಗ್ಯ ಕಡೆ ಗಮನಹರಿಸಿ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆನೀಡಿದರು.
ಸುಂಟಿಕೊಪ್ಪದ ಹತ್ತು ಮಂದಿಗೆ ಆಹಾರ ಕಿಟ್ ಹಾಗೂ ಸುರಕ್ಷಾ ಆರೋಗ್ಯ ಕಿಟ್ ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ, ಸೋಮವಾರಪೇಟೆ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಲೀನಾ, ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್ಕುಮಾರ್, ಸೋಮನಾಥ್, ಶಾಂತಿ, ವಸಂತಿ, ಮಂಜುಳ, ಮಾಜಿ ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಾಲವತಿ, ಪ್ರಾ.ಕೃ.ಪ.ಸ.ಸಂ ನಿರ್ದೇಶಕಿ ಲೀಲಾಮೇದಪ್ಪ, ಜಿಲ್ಲಾ ಹಿಂದುಳಿದ ವರ್ಗ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಮೋಹನ್, ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ಗಳಾದ ಬಿ.ಕೆ. ಪ್ರಶಾಂತ್, ವಾಸು ಮತ್ತಿತರರು ಇದ್ದರು.