ಕುಶಾಲನಗರ, ಜು. ೨೭: ಕಾವೇರಿ ಮಾತೆ ಅನುಗ್ರಹದಿಂದ ನಾಡು ಶ್ರೇಯಸ್ಸು ಕಾಣುವಂತಾಗಲಿ ಎಂದು ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಅವರು ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ ೧೨೧ನೇ ಮಹಾಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಂಬಿದ ಕಾವೇರಿಗೆ ಬಾಗಿನ ಅರ್ಪಿಸಿ ಮಾತನಾಡಿದರು.
ನದಿ ಬಗ್ಗೆ ಪ್ರತಿಯೊಬ್ಬರೂ ಪೂಜ್ಯ ಭಾವನೆ ಹೊಂದಬೇಕು ಎಂದ ಅವರು, ಕಳೆದ ೧೦ ವರ್ಷಗಳ ಕಾಲ ನಿರಂತರವಾಗಿ ಕಾವೇರಿ ಆರತಿ ಕಾರ್ಯಕ್ರಮ ನಡೆದುಬಂದಿರುವುದು ಶ್ಲಾಘನೀಯ ವಿಚಾರ ಎಂದರು. ಅರ್ಚಕರಾದ ಕೃಷ್ಣ ಮೂರ್ತಿ ಭಟ್ ಆರತಿ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಕೂಡಾ ಅಧ್ಯಕ್ಷ ಎಂ.ಎA. ಚರಣ್, ಪಂಚಾಯಿತಿ ಸದಸ್ಯ ಅಮೃತ್ರಾಜ್, ಬಳಗದ ಸಂಚಾಲಕ ಚಂದ್ರಮೋಹನ್, ಸೋಮಶೇಖರ್, ಜೋಯಪ್ಪ, ವೈಶಾಕ್, ವನಿತಾ ಚಂದ್ರಮೋಹನ್, ಶಿವಶಂಕರ್, ಸುಮನ್ ಮತ್ತಿತರರು ಇದ್ದರು.