ಮಡಿಕೇರಿ, ಜು. ೨೫: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಗಾಳಿ-ಮಳೆಯೊಂದಿಗೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದ ವಾತಾವರಣ ಇದೀಗ ಕೊಂಚ ಬದಲಾಗಿದೆ.

ನಿನ್ನೆಯಿಂದ ಒಂದಷ್ಟು ಮಳೆ ಕಡಿಮೆಯಾದಂತಿದೆ. ತಾ. ೨೫ ರಂದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಲಿನ ಕಿರಣಗಳು ಗೋಚರಿಸಿದೆ. ಆದರೂ ಕೆಲವೆಡೆ ಸಣ್ಣ ರೀತಿಯಲ್ಲಿ ಮಳೆ ಹನಿಯುತ್ತಿದ್ದು, ಮಳೆ ಸಂಪೂರ್ಣ ಕಡಿಮೆಯಾಗಿಲ್ಲ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನದ ತನಕ ವಿರಾಮ ನೀಡಿದ್ದ ಮಳೆ ನಂತರ ಸ್ವಲ್ಪಮಟ್ಟಿಗೆ ಸುರಿಯಿತು. ಜಿಲ್ಲೆಯ ಗೋಣಿಕೊಪ್ಪ, ಬಾಳೆಲೆ, ಕುಶಾಲನಗರ ಕಡೆಗಳಲ್ಲಿ ಮಳೆ ಪೂರ್ಣ ಇಳಿಮುಖವಾಗಿತ್ತು. ಸಂಜೆಯ ಬಳಿಕ ಅಲ್ಲಲ್ಲಿ ಒಂದಷ್ಟು ಹೆಚ್ಚಿನ ಮಳೆಯಾಗಿದೆ. ಪ್ರಸ್ತುತ ಜುಲೈ ೧೯ ರಿಂದ ಆರಂಭಗೊAಡಿರುವ ಪುಷ್ಯ ಮಳೆ ನಕ್ಷತ್ರ ಆಗಸ್ಟ್ ೧ರ ತನಕ ಮುಂದುವರಿಯಲಿದ್ದು, ಬಳಿಕ ಆಶ್ಲೇಷಾ ಮಳೆ ನಕ್ಷತ್ರ ಆರಂಭಗೊಳ್ಳಲಿದೆ.