ನಾಪೋಕ್ಲು, ಜು. ೨೫: ಇತ್ತೀಚೆಗೆ ಆಂದ್ರ ಪ್ರದೇಶದ ಕರಾಟೆ ಅಸೋಸಿಯೇಷನ್ ವತಿಯಿಂದ ಆನ್‌ಲೈನ್ ಮೂಲಕ ನಡೆದ ಕೋವಿಡ್ ರಿಲೀಫ್ ಫಂಡ್ ರಾಷ್ಟç ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬೇತು ಗ್ರಾಮದ ಬೊಳ್ಳೇಪಂಡ ನಿತಿನ್ ನಂಜಪ್ಪ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಟರ್ಕಿಯಲ್ಲಿ ಅಂತರ ರಾಷ್ಟಿçÃಯ ಮಟ್ಟದ ಅನ್ ಲೈನ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ನಿತಿನ್ ನಂಜಪ್ಪ ಬೊಳ್ಳೆಪಂಡ ಪೊನ್ನಣ್ಣ - ಶೋಭಾ ದಂಪತಿಯ ಪುತ್ರರಾಗಿರುತ್ತಾರೆ.