ಮಡಿಕೇರಿ, ಜು. ೨೫: ತಮ್ಮ ಕುಟುಂಬ ಸದಸ್ಯರೊಂದಿಗೆ ಕುಶಾಲನಗರದಿಂದ ಮಡಿಕೇರಿಗೆ ಕಾರಿನಲ್ಲಿ ಆಗಮಿಸುತ್ತಿದ್ದ ಯೋಧರೊಬ್ಬರ ಕಾರಿಗೆ ಡಿಕ್ಕಿಪಡಿಸಿ ಅವರನ್ನು ತಡೆದು, ಅವರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಮಹಿಳೆಯರು ಹಾಗೂ ವಯಸ್ಸಾದವರೆಂಬುದನ್ನೂ ಲೆಕ್ಕಿಸದೆ ಕೆಲವರು ಗುಂಪುಗೂಡಿ ಹಲ್ಲೆ ನಡೆಸಿದ ಕುರಿತು ವರದಿಯಾಗಿದೆ. ಪೊಲೀಸರು ವಿಷಯ ತಿಳಿದು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಹಲ್ಲೆ ಮಾಡಿದವರು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಬೋಯಿಕೇರಿ ಬಳಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಕೆಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ಬಯಲಾಗಬೇಕಿದೆ. ಹಲ್ಲೆಗೊಳಗಾದವರು ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳೆಂದು ತಿಳಿದುಬಂದಿದೆ.