ಕಣಿವೆ, ಜು.೨೫: ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿ ಮಳೆಯಿಂದಾಗಿ ಮನೆಗೋಡೆಗಳು ಉರುಳಿಬಿದ್ದ ಘಟನೆ ನಡೆದಿದೆ. ಹಾರಂಗಿ ರಸ್ತೆಯ ಅಗ್ನಿಶಾಮಕ ದಳ ಕಚೇರಿ ಬಳಿ ಇರುವ ಕನಕಮ್ಮ ಎಂಬವರ ಮನೆ ಗೋಡೆಗಳು ಕುಸಿದು ಬಿದ್ದಿದೆ. ಮನೆಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಸಾಮಗ್ರಿಗಳು ಜಖಂಗೊAಡಿವೆೆ. ಸ್ಥಳಕ್ಕೆ ಮುಳ್ಳುಸೋಗೆ ಗ್ರಾ.ಪಂ ಸದಸ್ಯರಾದ ಮಣಿ ಮತ್ತು ಆಸಿಫ್.ಸಿ.ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ರಾಮ ಲೆಕ್ಕಿಗ ಗೌತಂ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸರ್ಕಾರದ ಪರಿಹಾರವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.