*ವೀರಾಜಪೇಟೆ, ಜು. ೨೫: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಶಿಥಿಲಾವಸ್ಥೆಯಲ್ಲಿದ್ದ ಎರಡು ಅಂಗಡಿ ಮಳಿಗೆಗಳು ಮಳೆಗೆ ಕುಸಿದು ಬಿದ್ದಿವೆ. ಸೀನಾ ಹಾಗೂ ಅನ್ವರ್ ಎಂಬವರುಗಳು ನಡೆಸುತ್ತಿದ್ದ ಅಂಗಡಿಗಳು ಕುಸಿಯಲ್ಪಟ್ಟಿವೆ. ಅಪಾಯದ ಮುನ್ಸೂಚನೆ ಅರಿತು ಶನಿವಾರವೇ ಅಂಗಡಿಗಳನ್ನು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಕೋಮಲ ಹಾಗೂ ಐವಾನ್ ಇವರುಗಳು ಖಾಲಿ ಮಾಡಿಸಿದ್ದರಿಂದ ಹೆಚ್ಚಿನ ನಷ್ಟ ತಪ್ಪಿದೆ.