ಮಡಿಕೇರಿ, ಜು. ೨೫: ಕೊಡಗಿನ ಆರ್ಟ್ ಆಫ್ ಲಿವಿಂಗ್'ನ ವತಿಯಿಂದ ಅಲ್ಲಲ್ಲಿ ಗುರು ಪೂರ್ಣಿಮೆ ಆಚರಣೆ ನಡೆಸ ಲಾಯಿತು. ಸೋಮವಾರಪೇಟೆಯ ಆರ್ಟ್ ಆಫ್ ಲಿವಿಂಗ್'ನ ಶಿಕ್ಷಕಿ ರಾಗಿಣಿ ಅವರು ಆನ್ಲೈನ್ನಲ್ಲಿ ಗುರುಪೂರ್ಣಿಮೆಯನ್ನು ಆಯೋಜಿಸಿದ್ದರು. ಅಂದು ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಯೋಗ ಪ್ರಾಣಾಯಾಮ ಸುದರ್ಶನ ಕ್ರಿಯೆಯನ್ನು ಮಾಡಲಾಯಿತು. ನಂತರ ಗುರುಪೂಜಾ ಪಂಡಿತ್ ಪೋಡಮಾಡ ಭವಾನಿ ನಾಣಯ್ಯ ಅವರು ಗುರುಪೂಜೆಯನ್ನು ಮಾಡಿ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಪೂಜೆ ಧ್ಯಾನ ಮತ್ತು ಭಜನೆಯ ಮೂಲಕ ಕೃತಜ್ಞತೆಯನ್ನು ಅರ್ಪಿಸಿದರು. ಆನ್ಲೈನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಯವರ ಅನುಯಾಯಿಗಳು ಕೂಡ ಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಗುರುಪೂಜೆಯಲ್ಲಿ ಪಾಲ್ಗೊಂಡಿದ್ದ ಜನರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಗುರುಪೂರ್ಣಿಮೆ ಸಂಭ್ರಮಕ್ಕೆ ಮಂಗಳೂರಿನವರು ಪಾಲ್ಗೊಂಡು ತಮಗಾದ ಅನುಭವವನ್ನು ಹಂಚಿಕೊAಡದ್ದು ವಿಶೇಷವಾಗಿತ್ತು.