ವೀರಾಜಪೇಟೆ, ಜು. ೨೫ : ರಾಷ್ಟಿçÃಯ ಸ್ವಯಂ ಸೇವಕ ಸಂಘ ವೀರಾಜಪೇಟೆ ನಗರ ವತಿಯಿಂದ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಗುರುಪೂಜಾ ಉತ್ಸವ ಕಾರ್ಯಕ್ರಮ ನಡೆಯಿತು. ಭೌದಿಕ್ ನೀಡಲು ಆಗಮಿಸಿ ಮಾತನಾಡಿದ ಡಾಲಿ ಕುಟ್ಟಪ್ಪ ಅವರು, ತ್ಯಾಗ, ಶ್ರಮ ಮತ್ತು ಬಲಿದಾನಗಳ ತಳಹದಿಯ ಮೇಲೆ ಸಂಘದ ಕಾರ್ಯಚಟುವಟಿಕೆ ಗಳು ನಡೆಯುತ್ತಾ ಬಂದಿವೆ. ಸಂಘವು ವ್ಯಕ್ತಿ ಆರಾಧನೆಗೆ ಆದ್ಯತೆ ನೀಡದೆ ಭಗವತ್ ಧ್ವಜಕ್ಕೆ ಪ್ರಾಮುಖ್ಯತೆಯನ್ನು ನೀಡಿ ಗುರು ಎಂದರೆ ಧ್ವಜವೆಂದು ಸ್ವೀಕಾರ ಮಾಡಿದೆ. ಯುವಕÀರನ್ನು ಒಗ್ಗೂಡಿಸಿ ಕಟ್ಟಿದ ಸಂಘವು ಇಂದು ದೇಶವಲ್ಲದೆ ವಿದೇಶಗಳಲ್ಲಿ ತನ್ನ ಶಾಖೆಗಳ ಮೂಲಕ ಹಿಂದುತ್ವವನ್ನು ವಿಸ್ತರಿಸಿಕೊಂಡು ಬಂದಿದೆ. ರಾಷ್ಟç ಭಕ್ತಿ ಎಲ್ಲರ ಮನದಲ್ಲೂ ಜಾಗೃತವಾಗಬೇಕು. ಸಂಸ್ಕೃತಿ, ಜೀವನದ ಮೌಲ್ಯಗಳಿಗೆ ಗೌರವ ನೀಡಿದಲ್ಲಿ ಸುಸಂಸ್ಕೃತ ರಾಷ್ಟçವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರಾದ ಬಿ.ಎಸ್ ಪುಷ್ಪರಾಜ್ ಅವರು ಬುದ್ಧನು ತನ್ನ ಅನುಯಾಯಿಗಳಿಗೆ ಧರ್ಮ ಭೋದನೆ ಮಾಡಿದ ದಿನವಾಗಿದೆ. ಜೀವನದ ಪ್ರತಿ ಯೊಂದು ಮೌಲ್ಯಗಳನ್ನು ಕಲಿಸಿಕೊಟ್ಟ ಗುರುವಿಗೆ ನಮನ ಮಾಡುವ ಅಥವಾ ಸ್ಮರಣೆ ಮಾಡುವ ದಿನವಾಗಿದೆ. ಹುಟ್ಟುವ ಪ್ರತಿಯೊಂದು ಮಗುವಿಗೆ ತಾಯಿ ಮನೆಯ ಗುರುವಾದರೆ. ತಂದೆ ಜೀವನದ ಶೈಲಿಯನ್ನು ಕಲಿಸುವ ಗುರುವಾಗಿರುತ್ತಾರೆ. ಜ್ಞಾನವನ್ನು ಕಲಿಸುವ ಗುರುವೇ ಶ್ರೇಷ್ಟನಾಗುತ್ತಾನೆ. ಗುರುವಿಲ್ಲದ ಜೀವನ ಅಜ್ಞಾನದ ಸಂಕೇತವಾಗಿದೆ. ಜೀವನದ ಮೌಲ್ಯಗಳನ್ನು ಅರಿತು ಸರ್ವರು ಮುಂದಾಗಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ವೀರಾಜಪೇಟೆ ನಗರದ ಸ್ವಯಂ ಸೇವಕರು, ಸಂಘದ ಹಿತೈಷಿಗಳು, ನಗರದ ವಿವಿಧೆಡೆಗಳಿಂದ ಆಗಮಿಸಿದ ಸಮಾಜ ಬಾಂಧವರು ಹಾಜರಿದ್ದರು.