‘ಶಕ್ತಿ’ ವರದಿ ಫಲಶುÈತಿ
ವೀರಾಜಪೇಟೆ, ಜು. ೨೩ : ನಗರದ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಒಂದು ವಾರದಿಂದ ನೀರು ಸರಬರಾಜು ಮಾಡುತ್ತಿದ್ದ ಮೋಟಾರ್ ಕೆಟ್ಟು ಹೋಗಿ ಸಾರ್ವಜನಿಕರು, ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮಳಿಗೆಗಳು, ಚಾಲಕರು, ನಿರ್ವಾಹಕರು ತೊಂದರೆಗೆ ಸಿಲುಕಿದ್ದರು. ಇದೀಗ ಪತ್ರಿಕೆಯ ವರದಿಯ ಪರಿಣಾಮ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಅರಿತು ಮೋಟಾರ್ ದುರಸ್ತಿ ಮಾಡಿದ್ದು, ಕೆಲವು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ನೀರು ಸರಬರಾಜು ಚಾಲನೆಗೊಂಡಿದೆ. ಸಾರ್ವಜನಿಕರು ಪ್ರಯಾಣಿಕರು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಮಸ್ಯೆ ಬಗ್ಗೆ ತಾ. ೨೨ರ ‘ಶಕ್ತಿ’ಯಲ್ಲಿ ಪ್ರಕಟಗೊಂಡಿತ್ತು.