ಸೋಮವಾರಪೇಟೆ, ಜು. ೨೩: ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿಯ ತ್ರೆöÊಮಾಸಿಕ ಸಭೆಗಳಿಗೆ ನಿರಂತರವಾಗಿ ಗೈರಾಗುತ್ತಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ತಹಶೀಲ್ದಾರ್ ಗೋವಿಂದಾರಾಜು ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಎಸ್‌ಸಿ ಎಸ್‌ಟಿ ಹಿತರಕ್ಷಣಾ ಸಮಿತಿ ತ್ರೆöÊಮಾಸಿಕ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಇ. ಜಯೇಂದ್ರ, ಸಭೆಗೆ ಅನೇಕ ಅಧಿಕಾರಿಗಳು ಗೈರಾಗಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಸತತ ನಾಲ್ಕು ಸಭೆಗಳಿಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಬೇಕು ಮತ್ತು ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಭೆ ತೀರ್ಮಾನಿಸಿತು.
ಹಿಂದಿನ ಸಭೆಯಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಮ್ಮ ಎಂಬವರ ಮನೆಗೆ ತೆರಳಲು ರಸ್ತೆ ಸಂಪರ್ಕ ಇಲ್ಲ ಎಂದು ದೂರು ನೀಡಲಾಗಿತ್ತು. ಕಳೆದ ೧೨ ವರ್ಷಗಳ ಹಿಂದೆಯೇ ಪಂಚಾಯಿತಿ ಸಭೆಯಲ್ಲಿ ರಸ್ತೆ ಬಿಟ್ಟುಕೊಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ನಾಲ್ಕು ಸಭೆಗಳು ಕಳೆದರೂ ಇನ್ನೂ ಸರಿಪಡಿಸಿಲ್ಲ ಎಂದು ದೂರಿದರು.
ತಾಲೂಕು ಪಂಚಾಯಿತಿ ವ್ಯವಸ್ಥಾಪಕರೊಂದಿಗೆ ತೆರಳಿ ಸ್ಥಳ ಪರಿಶೀಲಿಸಲಾಗಿ, ಪಂಚಾಯಿತಿಗೆ ಸೇರಿದ ಒಂದು ಶೆಡ್ ಇದ್ದು, ಇದು ಯಾರಿಗೂ ಉಪಯೋಗವಾಗುತ್ತಿಲ್ಲ. ಕೂಡಲೇ ಅದನ್ನು ತೆರವುಗೊಳಿಸಿದ್ದಲ್ಲಿ ರಸ್ತೆ ಸಮಸ್ಯೆ ಬಗೆಹರಿಯುತ್ತದೆ. ಆದರೆ, ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದೂರನ್ನು ಮುಗಿಸಿದ್ದಾರೆ ಎಂದು ಸಮಿತಿ ಸದಸ್ಯ ಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಆ ಸ್ಥಳಕ್ಕೆ ಸಂಬAಧಿಸಿದ ದಾಖಲಾತಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಹರಿದುಹಾಕಿದ್ದಾರೆ. ಆದರೂ ಅಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳ ಬೇಕೆಂದರು. ವಿಷಯಕ್ಕೆ ಸಂಬAಧಿಸಿ ದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಸಭೆ ತೀರ್ಮಾನಿಸಿತು.
ಅರಣ್ಯ ಇಲಾಖೆಯಿಂದ ತಾಲೂಕಿನ ಶನಿವಾರಸಂತೆ, ಕುಶಾಲನಗರ ಹಾಗೂ ಸೋಮವಾರ ಪೇಟೆಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ೨೦೧೮-೧೯ನೇ ಸಾಲಿನಲ್ಲಿ ರೂ. ೪೪ ಲಕ್ಷದಲ್ಲಿ ಅಡುಗೆ ಅನಿಲ ವಿತರಿಸಲಾಗಿದೆ. ವಿರಾಜಪೇಟೆಯ ರವಿರಾಜ್ ಗ್ಯಾಸ್ ಏಜೆನ್ಸಿಯವರು ಪರಿಶಿಷ್ಟ ಜಾತಿಯವರಿಗೆ ೨೬೦ ಹಾಗೂ ಪಂಗಡದವರಿಗೆ ೧೬೧ ಸೌಲಭ್ಯವನ್ನು ವಿತರಿಸಿದ್ದಾರೆ. ಆದರೆ, ಇದು ಸರಿಯಾಗಿ ವಿತರಣೆಯಾಗಿಲ್ಲ. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಜಯೇಂದ್ರ ಆರೋಪಿಸಿದರು.
ಫಲಾನುಭವಿಗಳ ಪಟ್ಟಿ ನೀಡುವಂತೆ ಕಳೆದ ಸಭೆಗಳಲ್ಲಿ ಕೇಳಲಾಗಿತ್ತು. ಆದರೆ, ಇಲ್ಲಿಯವರೆಗೆ ನೀಡಿಲ್ಲ. ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸರಿಯಾಗಿ ಮಾಹಿತಿ ನೀಡದ ಅರಣ್ಯ ಇಲಾಖೆ ಮತ್ತು ಗ್ಯಾಸ್ ಸಂಸ್ಥೆಯ ಮಾಲೀಕರ ಮೇಲೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸಭೆ ತೀರ್ಮಾನಿಸಿತು.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ಗ್ರಾಮದಲ್ಲಿ ೧೨ ಏಕರೆ ಸ್ಮಶಾನಕ್ಕೆ ಸ್ಥಳವಿದ್ದು, ಅದರಲ್ಲಿ ೧.೭೫ ಏಕರೆ ಪ್ರದೇಶವನ್ನು ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿಡ ಲಾಗಿದೆ. ಉಳಿದ ಸ್ಥಳವನ್ನು ಹದ್ದುಬಸ್ತು ಸರ್ವೆ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ಮಶಾನಕ್ಕೆ ಸ್ಥಳ ನೀಡುವಂತೆ ಸರ್ವೆ ಇಲಾಖೆಗೆ ತಹಶೀಲ್ದಾರ್ ಸೂಚಿಸಿದರು.
ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಹಣ ಬರುತ್ತಿದೆ. ಅದರ ಬಳಕೆಯಾಗುತ್ತಿಲ್ಲ. ತಾಲ್ಲೂಕಿನ ಇತರ ಇಲಾಖೆಗಳಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿರುವ ಸವಲತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಜಯೇಂದ್ರ ಮನವಿ ಮಾಡಿದರು.
ಸಭೆಯಲ್ಲಿ ಬಿಇಓ ಹೆಚ್.ಕೆ. ಪಾಂಡು, ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್‌ಕುಮಾರ್, ಜಿ.ಪಂ ಎಇಇ ವೀರೇಂದ್ರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಜಿ. ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.