ಮಡಿಕೇರಿ, ಜು. ೨೪: ಮಧ್ಯರಾತ್ರಿ ಕಳೆದು ಶನಿವಾರ ಬೆಳಿಗ್ಗೆ ೨ ಗಂಟೆ ಸಮಯ ಸಂಪಾಜೆ ಗೇಟ್‌ನಲ್ಲಿ ವಾಹನಗಳ ಓಡಾಟದ ಸದ್ದು ಸರಾಗವಾಗಿ ಕೇಳಿಬಂತು. ಕುತೂಹಲದಿಂದ ಸ್ಥಳಕ್ಕೆ ತೆರಳಿದಾಗ ಭಾರೀ ಸಾಮಗ್ರಿಗಳ ತೂಕ ಹೊತ್ತ ೧೨ ಚಕ್ರಗಳ ಲಾರಿಗಳೂ ಸಲೀಸಾಗಿ ಸಂಪಾಜೆ ಗೇಟ್‌ಗಾಗಿ ತೆರಳುತ್ತಿದ್ದವು. ಶಿರಾಡಿಘಾಟ್‌ನಲ್ಲಿ ಭಾರೀ ವಾಹನಗಳ ಓಡಾಟ ನಿಷೇಧಗೊಂಡ ಬಳಿಕ ಇದೀಗ ಸಂಪಾಜೆ-ಕುಶಾಲನಗರ ಮಾರ್ಗವಾಗಿ ರಾತ್ರಿ ವೇಳೆ ಭಾರೀ ತೂಕದ ವಾಹನಗಳು ಬರಲಾರಂಭಿಸಿವೆ.

ಕೊಡಗು ಜಿಲ್ಲಾಧಿಕಾರಿಯವರು ೧೬ ಟನ್‌ಗಿಂತ ಅಧಿಕ ಸರಕು

ಸಾಗಾಣೆ ವಾಹನವನ್ನು ನಿಷೇಧಿಸಿದ್ದರೂ, ಕಾನೂನು ಉಲ್ಲಂಘಿಸಿ ರಾತ್ರಿ ವೇಳೆ ಸಂಚಾರ ಕಂಡುಬAದಿದೆ. ಈ ಸಂಬAಧ ಪ್ರಾಯೋಗಿಕವಾಗಿ ನಿರ್ಬಂಧಿಸದಿದ್ದರೆ ಕೊಡಗಿನ ರಸ್ತೆಗಳು ಮತ್ತೆ ಕುಸಿತವುಂಟಾಗಿ ಅಪಾಯ ಎದುರಾಗಲಿದೆ. -ಇಬ್ರಾಹಿಂ, ಮದೆನಾಡು.