ಮಡಿಕೇರಿ, ಜು. ೨೪ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಶರಣರು ರಚಿಸಿದ ವಚನಗಳ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಬಳಗ ಪ್ರಕಟಣೆಯಲ್ಲಿ ತಿಳಿಸಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಹೀಗೆ ಹಲವರು ರಚಿಸಿದ ವಚನಗಳನ್ನು ಹಾಡಬಹುದಾಗಿದೆ.

ಪ್ರತಿದಿನ ಸಂಜೆ ೫.೩೦ ಗಂಟೆಯಿAದ ೬.೩೦ ರವರೆಗೆ ಕಾರ್ಯಕ್ರಮ ಆನ್‌ಲೈನ್ ಮೂಲಕ ನಡೆಯಲಿದೆ. ನೋಂದಾಯಿಸಲು ತಾ. ೨೭ ಕೊನೆಯ ದಿನವಾಗಿದೆ. ಆಸಕ್ತರು ೯೪೪೮೩೪೬೨೭೬, ೯೪೪೯೪೫೧೧೯೧ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬಳಗದ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತ ತಿಳಿಸಿದ್ದಾರೆ.