ಮಡಿಕೇರಿ, ಜು. ೨೪: ಅರ್ವತ್ತೋಕ್ಲು ಬೇಕೊಟ್ ಮಕ್ಕ ಯುವಕ ಮಂಡಲ ವತಿಯಿಂದ ತಾ.೨೫ ರಂದು (ಇಂದು)ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಓಟದ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ತಳೂರು ಚಂಗಪ್ಪ ಹಾಗೂ ಕುಶಾಲಪ್ಪ ಅವರ ಗದ್ದೆಯಲ್ಲಿ ಬೆಳಿಗ್ಗೆ ೯ ರಿಂದ ೩ ಗಂಟೆಯವರೆಗೆ ಕ್ರೀಡಾಕೂಟ ನಡೆಯಲಿದೆ. ಮಂಡಲದ ಅಧ್ಯಕ್ಷ ಸೂರಿ ಕಾಕೇರಿ ಹಾಗೂ ಕೃಷಿಕರಾದ ಕೋಳುಮಾಡನ ಉತ್ತಪ್ಪ, ಕಡ್ಲೇರ ಗಣೇಶ್, ಪಟ್ಟಾಂದಿರ ಪೂವಯ್ಯ, ತಳೂರು ಐನ್ಮನೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ತಳೂರು ಕೇಶವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.