"ನವಮಾಸ ನೋವನ್ನು ಹೊತ್ತು ಜೀವನಪೂರ್ತಿ ದುಡಿಯುವ ಅಮ್ಮ, ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನು ಶ್ರಮಿಸುವ ಅಪ್ಪ" ಈ ಮಾತುಗಳೇ ಸಾಕು ಪೋಷಕರು ತಮ್ಮ ಅರ್ಧ ಆಯಸ್ಸನ್ನು ಮಕ್ಕಳಿಗಾಗಿ ಮುಡಿಪಾಗಿಡುವುದಕ್ಕೆ ಸಾಕ್ಷಿಯಾಗಿ. ತಮ್ಮ ಇಳಿ ವಯಸ್ಸಿನಲ್ಲಿ ಅದೆಷ್ಟು ಜನ ಸಾರ್ಥಕ್ಯ ಭಾವದಿಂದ ಬೀಗುವರೋ? ಅದೆಷ್ಟು ಜನ ಜಿಗುಪ್ಸೆಯಿಂದ ನರಳುವರೋ? ಇದಕ್ಕಾಗಿ ಇಡೀ ಜೀವಮಾನದಲ್ಲಿ ಗಣನೆಗೆ ಬಂದಿದ್ದು ಅವರ ಬಾಲ್ಯ, ಹರೆಯದ ಅನುಭವಗಳಲ್ಲ... ಪೋಷಕರಾಗಿ ನಿರ್ವಹಿಸಿದ ಪಾತ್ರದಲ್ಲಿನ ತುಲನಾತ್ಮಕ ಆಲೋಚನೆಗಳು. ಹಾಗಾದರೆ ತಮ್ಮ ಇಡೀ ಬದುಕಿನ ಫಲಿತಾಂಶವಡಗಿದ್ದು ಇದೇ ಪೋಷಕತ್ವದ ಪಾಲನೆಯಲ್ಲಿ ಎಂದಾಯಿತು.
ಜೀವನವೇ ಒಂದು ಪಾಠಶಾಲೆ. ಇದು ಅನುಭವದ ಮೇಲೆ ಸಾಗುವ ಪಯಣ. ತಮ್ಮ ಪೋಷಕರೊಂದಿಗೆ ಬೆಳೆದ, ತಾವು ಕಳೆದ ಅನುಭವಗಳೇ ನಾವು ಪೋಷಕರಾದಾಗ ಸಿಕ್ಕ ಜೀವನ ಪಾಠ. ಆ ದಿನಗಳಲ್ಲಿ ನಾವು ಪೋಷಕರನ್ನು ಕಂಡ ರೀತಿ ಇಂದು ಪೋಷಕರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಅಂದು ಖಳನಾಯಕರಂತೆ ಕಂಡವರು ಇಂದು ದೇವತೆಗಳಾಗಿದ್ದಾರೆ. ನಿಜ ಪೋಷಕರ ಜವಾಬ್ದಾರಿ, ನಿರ್ವಹಿಸಬೇಕಾದ ಪಾತ್ರ, ಅಷ್ಟು ಸುಲಭವಲ್ಲ ನಿಭಾಯಿಸಲು. ಎಲ್ಲರೂ ತಂದೆ-ತಾಯಿಗಳಾಗಬಹುದು. ಆದರೆ ನಿಜವಾದ ಪೋಷಕರ ಸ್ಥಾನ ಪರಿಪೂರ್ಣವಾಗುವುದು ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ. ಒಂದೊAದು ಕಾಲಘಟ್ಟದಲ್ಲಿಯೂ ಪೋಷಕರ ಜವಾಬ್ದಾರಿಯಲ್ಲಿ ಬದಲಾವಣೆಗಳಾಗುತ್ತಲೇ ಇದೆ.. ಏಕೆಂದರೆ ಬದಲಾವಣೆ ಎನ್ನುವುದು ಜಗದ ನಿಯಮ. ಜಗತ್ತಿನ ಅಪೇಕ್ಷೆಗೆ, ಅನಿವಾರ್ಯತೆಗೆ ಅನುಗುಣವಾಗಿ ಪೋಷಕರ ಪಾತ್ರದಲ್ಲಿಯೂ ಅನೇಕ ಮಾರ್ಪಾಡುಗಳಾಗಿವೆ. ಆಗಲೇಬೇಕು ಕೂಡ. ಕಾಲಕ್ಕೆ ಸರಿಯಾಗಿ ನಮ್ಮ ಯೋಚನಾಲಹರಿ, ಚಿಂತನೆ ಅಭಿವ್ಯಕ್ತಿ ಯಲ್ಲಿಯೂ ಮಾರ್ಪಾಡುಗಳಾಗಿವೆ. ಹಿಂದೆ ಇದ್ದ ಪೋಷಕರ ಜವಾಬ್ದಾರಿ ಈಗ ಇನ್ನೂ ವಿಸ್ತಾರವಾಗುತ್ತಲೇ ಇದೆ. ಅಂದಿನ ಪೋಷಕರಿಗಿದ್ದ ನಿರಾಳತೆ ಈಗ ಗಗನ ಕುಸುಮದಂತೆ. ಆರಂಭದಿAದಲೂ ಮಕ್ಕಳ ಪ್ರತಿ ಬೆಳವಣಿಗೆಯಲ್ಲಿಯೂ ಅತಿ ಹೆಚ್ಚಿನ ಒತ್ತಡಕ್ಕೆ ಸಿಲುಕುವ ಸಂದರ್ಭಗಳೇ ಹೆಚ್ಚು. ಗಂಡ-ಹೆAಡತಿಯರಿಬ್ಬರೂ ಉದ್ಯೋಗದಲ್ಲಿದ್ದಾಗ ತಮ್ಮ ಮಕ್ಕಳ ಪಾಲನೆ- ಪೋಷಣೆ, ಶಿಕ್ಷಣದ ವಿಚಾರದಲ್ಲಿ ಹೆಚ್ಚಿನ ಸಮಯ ಮೀಸಲಿಡಲಾಗಿದೆ ಒಂದು ರೀತಿಯಲ್ಲಿ ಖಿನ್ನತೆಗೂ ಒಳಗಾಗುವವರಿದ್ದಾರೆ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲಾಗದೆ ನೈಜ ಜೀವನದ ಸಂತೋಷವನ್ನು ಕಳೆದುಕೊಳ್ಳುತ್ತಿರುವ ಅದೆಷ್ಟೋ ಪೋಷಕರಿದ್ದಾರೆ. ಇದರ ಪರಿಣಾಮ ಮಕ್ಕಳು ಒಂಟಿತನದಿAದ ಎಲೆಕ್ಟಾçನಿಕ್ ಮೀಡಿಯಾದ ಮೊರೆ ಹೋಗುತ್ತಿದ್ದು ನೈಜವಾದ ಮಾನವೀಯ ಸಂಬAಧಗಳಿAದ ದೂರ ಆಗುತ್ತಿರುವುದು ದುರಂತಮಯ. ಲಾಕ್ ಡೌನ್ ದಿನಗಳಲ್ಲಿ ಮಕ್ಕಳ ಸಂಪೂರ್ಣ ಜವಾಬ್ದಾರಿ ಪೋಷಕರಿಗೆ ಮೀಸಲಾಗಿದೆ. ಮನೆಯೇ ಮೊದಲ ಪಾಠಶಾಲೆ ಎಂಬAತೆ ಆನ್ಲೈನ್ ತರಗತಿಗಳು ಪೋಷಕರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈಗಿನ ಜಗತ್ತಿನ ಆಗುಹೋಗುಗಳನ್ನು ಗಮನಿಸುವಾಗ ಮೌಲ್ಯಾಧಾರಿತ ನೈತಿಕ ಶಿಕ್ಷಣದ ಜೊತೆಗೆ ಸ್ವಾವಲಂಬನೆಯ ಪಾಠ ಮಕ್ಕಳಿಗೆ ಬಹಳವೇ ಅನಿವಾರ್ಯವಾಗಿದೆ. ಮಗುವಿನ ಬೆಳವಣಿಗೆಯಲ್ಲಿ ಅದರ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ತಾನೇ ತಾನಾಗಿ ಸ್ವಯಂಪ್ರೇರಣೆಯಿAದ ತನ್ನ ಜವಾಬ್ದಾರಿಯನ್ನು ನೋಡಿಕೊಳ್ಳುವಂತೆ ಪ್ರೇರೇಪಿಸಬೇಕು. ದೈನಂದಿನ ಬದಲಾವಣೆಗಳಿಗೆ ಹೊಂದಿಕೊAಡು ಹೋಗುವಂತಹ ಜೀವನ ಕೌಶಲ್ಯವನ್ನು ರೂಪಿಸಬೇಕು. ಪೋಷಕರಾಗಿ ನಾವು ನಮ್ಮ ಮಕ್ಕಳಿಗೆ ಯಾವುದರಲ್ಲಿಯೂ ಏನೂ ಸಮಸ್ಯೆಯಾಗದಂತೆ, ಕೊರತೆಯಾಗದಂತೆ ಬೆಳೆಸಬೇಕೆಂಬ ಕನಸುಗಳು ಎಲ್ಲೋ ಮಕ್ಕಳ ಪರಾವಲಂಬನೆಗೆ ಕಾರಣವಾಗುತ್ತಿದೆ. ಆದರೆ ಆ ರೀತಿ ಬೆಳೆಸಿದ ಮಕ್ಕಳು ಭವಿಷ್ಯದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳಿಗೂ ಧೃತಿಗೆಡುವ, ಅವಲಂಬಿತವಾಗುವ ಸಂದರ್ಭಗಳೇ ಹೆಚ್ಚು. ಬಾಲ್ಯದ ಸುಖಜೀವನವನ್ನು ಮನಸ್ಸು ಬಯಸುವುದು ಸಹಜವೇ. ಆದರೆ ವಾಸ್ತವ ಬದುಕಿಗೆ ಅಪೇಕ್ಷಿತ ವರ್ತನೆಯನ್ನು ಮಗು ಬೆಳೆಸಿಕೊಂಡರೆ ಸಾಕು. ಪೋಷಕರ ಜವಾಬ್ದಾರಿ ಅರ್ಧ ಕಡಿಮೆಯಾದಂತೆ. ಮಕ್ಕಳ ಪೋಷಣೆ ಪೋಷಕರಿಗೆ ಹೊರೆಯಾಗದೆ ಒಂದು ಸಾರ್ಥಕತೆಯ ಭಾವವನ್ನು ಮೂಡಿಸುವಂತಾಗಬೇಕು ಇಲ್ಲಿ ಮಕ್ಕಳ ಮತ್ತು ಪೋಷಕರ ನಡುವೆ ಭಾವನಾತ್ಮಕ ಸಂಬAಧಗಳು ಉತ್ತಮವಾಗಿದ್ದಾಗ ಬೇರೆಲ್ಲ ವಿಚಾರಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ಒಂದು ಹಂತದವರೆಗೆ ಅಷ್ಟೇ ನಮ್ಮ ಅನಿವಾರ್ಯತೆ ಅವರಿಗೆ. ರೆಕ್ಕೆ ಬಲಿತ ಹಕ್ಕಿಹಾರಲು ಅನುವಾಗುವಂತೆ, ಮಕ್ಕಳ ಬೌದ್ಧಿಕ ಮಾನಸಿಕ ಮಟ್ಟದ ಬೆಳವಣಿಗೆಗೆ ನಾವು ಸಹಕರಿಸುತ್ತ ಅವರನ್ನು ಸ್ವತಂತ್ರರನ್ನಾಗಿಸಬೇಕು .ಅವರವರ ಜೀವನದ ರೂಪುರೇಷೆ ಅವರಿಗೆ ವಹಿಸೋಣ. ಆ ಮನಸ್ಥಿತಿಯೊಂದಿಗೆ ಮಕ್ಕಳ ಪೋಷಣೆಯ ಜವಾಬ್ದಾರಿ ಹೊತ್ತಾಗ ಖಂಡಿತ ನಮ್ಮ ಮೇಲಿನ ಅರ್ಧ ಭಾರ ಕಡಿಮೆಯಾದಂತೆ. ಅವಿಭಕ್ತ ಕುಟುಂಬಗಳಿದ್ದಾಗ ಕುಟುಂಬದ ಸರ್ವ ಸದಸ್ಯರು ಪೋಷಕರ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ತಂದೆ-ತಾಯAದಿರು ಎಲ್ಲರ ಪಾತ್ರಧಾರಿಗಳಾಗಿ ಜವಾಬ್ದಾರಿ ನಿರ್ವಹಿಸುವುದು ಕಷ್ಟಸಾಧ್ಯ. ಬದುಕಿನ ಬಂಡಿಗೆ ತಂದೆ-ತಾಯಿಗಳು ಎರಡು ಚಕ್ರವಿದ್ದಂತೆ. ಹಾಗಾಗಿ ಬಂಡಿಯ ಪಯಣ ಸುಗಮ. ದುರಾದೃಷ್ಟವಶಾತ್ ಏಕ ಪೋಷಕತ್ವದ ನಿರ್ವಹಣೆಯಲ್ಲಿರುವ ತಂದೆಯಾಗಲಿ, ತಾಯಿಯಾಗಲಿ ಇಬ್ಬರ ಸ್ಥಾನವನ್ನು ನಿರ್ವಹಿಸಿಕೊಂಡು ಹೋಗಲೇಬೇಕು. ನಿಜಕ್ಕೂ ತ್ಯಾಗಮಯ ಜೀವನ ಅವರದ್ದು. ತಮ್ಮ ಮಕ್ಕಳ ಬದುಕು ಒಂದು ಹಂತಕ್ಕೆ ಮುಟ್ಟುವವರೆಗೆ ತಮ್ಮೆಲ್ಲಾ ತನುಮನ ಧನವನ್ನು ಅರ್ಪಿಸುವ ಪೋಷಕರಿಗಾಗಿ ಇಂದಿನ ಒಂದು ದಿನ ಮಾತ್ರ ಸೀಮಿತವಲ್ಲ. ದೈನಂದಿನ ಸ್ಮರಣೆಗೆ ಸಲ್ಲ ಬೇಕಾದ ವಿಚಾರ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸಂತ ಅನ್ನಮ್ಮ ಪದವಿ ಕಾಲೇಜು, ವೀರಾಜಪೇಟೆ.