ಮಡಿಕೇರಿ, ಜು. ೨೩: ಹಲವು ಬಾರಿ ಮನವಿ ಮಾಡಲಾಗಿದ್ದರೂ ಸಹ ಕೊಡಗು ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಗೋಹತ್ಯೆಯಂತಹ ಕಾನೂನುಬಾಹಿರ ಕೃತ್ಯಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಲಾಗದ್ದರಿಂದ ಸಮಾಜದಲ್ಲಿ ಸಂಘರ್ಷಗಳು ನಡೆಯುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಆರೋಪಿಸಿದೆ.
ಜಿಲ್ಲೆಯಲ್ಲಿ ನಿರಾತಂಕವಾಗಿ ಗೋವುಗಳ ಕಳ್ಳತನ, ಅಕ್ರಮ ಗೋಸಾಗಾಟ, ಗೋಮಾಂಸ ಮಾರಾಟ, ಗೋಹತ್ಯೆ ಪ್ರಕರಣಗಳು ನಡೆಯುತ್ತಲೇ ಇದ್ದರೂ ಸೂಕ್ಷ್ಮ ಪ್ರದೇಶಗಳ ಕಣ್ಗಾವಲಿಗಾಗಿ ಸಿ.ಸಿ. ಕ್ಯಾಮರಾ ಅಳವಡಿಸುವುದು, ರಾತ್ರಿ ಗಸ್ತು ಹೆಚ್ಚಿಸುವುದು,ಸೈಬರ್ ಕ್ರೈಂ ಮೂಲಕ ದುಷ್ಕರ್ಮಿಗಳ ಲಿಂಕ್‌ಗಳನ್ನೂ ಕಂಡು ಹಿಡಿಯುವುದು, ಇಂಟೆಲಿಜೆನ್ಸ್ ಮತ್ತು ಗ್ರಾಮ ಬೀಟ್ ಸಿಬ್ಬಂದಿಗಳ ಮೂಲಕ ಕಾನೂನು ಬಾಹಿರ ಕೃತ್ಯ ನಡೆಸುವವರ ಮಾಹಿತಿಗಳನ್ನು ಕಲೆಹಾಕಿ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಿದ್ದರೂ ಸಹ ಅದಕ್ಕೆ ಪೂರಕವಾಗಿ ಇಲಾಖೆ ಕೆಲಸ ನಿರ್ವಹಿಸದೇ ಇರುವುದು ಸಾರ್ವಜನಿಕರ ಅನುಮಾನಗಳಿಗೆ ಕಾರಣವಾಗಿದೆ. ಹಿಂದೂ ಪರ ಸಂಘಟನೆಗಳ ಗಮನಕ್ಕೆ ಬರುವ ದುಷ್ಕೃತ್ಯಗಳು ಇಲಾಖೆಗಳ ಗಮನಕ್ಕೆ ಮಾತ್ರ ಬಾರದೇ ಇರುವುದು ಸಹ ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿವೆ ಎಂದು ವೇದಿಕೆ ಹೇಳಿದೆ.
ಗೋವನ್ನು ಪೂಜ್ಯ ಭಾವನೆಯಿಂದ ಕಾಣುವ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಮತಾಂಧರು ಉದ್ದೇಶಪೂರ್ವಕವಾಗಿ ಘಾಸಿಗೊಳಿಸುತ್ತಿದ್ದು ಕಾನೂನು ಕ್ರಮಕೈಗೊಳ್ಳಬೇಕಾದವರ ನಿರ್ಲಕ್ಷö್ಯತನದಿಂದಾಗಿ ಪದೇ ಪದೇ ಅಪರಾಧ ಕೃತ್ಯಗಳು ನಡೆಯುತ್ತಲೇ ಇವೆ. ಕಳೆದೆರೆಡು ದಿನಗಳ ಹಿಂದೆ ಹಬ್ಬದ ಹೆಸರಿನಲ್ಲಿ ಮಾಂಸ ಭಕ್ಷಣೆಯ ದುರಾಸೆಯ ನೆಪದಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದಿರುವ ಹಲವಾರು ಗೋಹತ್ಯೆ ಗೋಮಾಂಸ ಸಾಗಾಟದಂತಹ ಪ್ರಕರಣಗಳನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಬೆಳಕಿಗೆ ತಂದಿದ್ದಾರೆ. ಆದರೆ ಸಂಭವನೀಯ ದಷ್ಕೃತ್ಯಗಳ ತಡೆಗಾಗಿ ಪೊಲೀಸ್ ಇಲಾಖೆಯ ಪಾತ್ರವೇನು? ಎಂದು ಪ್ರಶ್ನಿಸಿದೆ. ಸರಕಾರ ಜಾರಿಗೆ ತಂದಿರುವ ನೂತನ ಗೋಹತ್ಯೆ ನಿಷೇಧ ಕಾನೂನನ್ನು ಸಮರ್ಥವಾಗಿ ಜಾರಿಗೊಳಿಸುವಲ್ಲಿ ಇಲಾಖಾ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದರ ಬಗ್ಗೆ ಸಮಾಜದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಸಮಾಜ ವಿರೋಧಿ ದುಷ್ಕೃತ್ಯಗಳನ್ನು ತಡೆಯಲಾಗದೇ ಇರುವುದಕ್ಕಾಗಿ ಹಿಂದೂ ಜಾಗರಣ ವೇದಿಕೆ ಅನಿವಾರ್ಯವಾಗಿ ಅಖಾಡಕ್ಕೆ ಇಳಿಯಲೇಬೇಕಾದ ಸಂದರ್ಭ ಬಂದೊದಗಿದೆ ಎಂದು ವಿವರಿಸಿದೆ.
ಮೊನ್ನೆ ಗರಗಂದೂರು ಸಮೀಪ ಆಟೋರಿಕ್ಷಾದಲ್ಲಿ ವ್ಯಕ್ತಿಯೊಬ್ಬಾತ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಆತನನ್ನು ಪೊಲೀಸರಿಗೆ ಒಪ್ಪಿಸಬೇಕೆನ್ನುವ ಸಂದರ್ಭದಲ್ಲಿ ಆತ ಆಟೋ ಡಿಕ್ಕಿ ಪಡಿಸುವ ಪ್ರಯತ್ನದೊಂದಿಗೆ ಪರಾರಿಯಾಗಲು ಯತ್ನಿಸಿದ್ದ ವೇಳೆ ಗೊಂದಲವಾಗಿದೆ. ಆದರೆ ಕಾನೂನು ಬಾಹಿರ ಕೃತ್ಯ ನಡೆಸುವ ದುಷ್ಕರ್ಮಿಯ ಪರವಾಗಿ ಸಂಘಟನೆಯೊAದು ಧ್ವನಿ ಎತ್ತಿರುವುದು ಆ ಸಂಘಟನೆಯ ಸೈದ್ಧಾಂತಿಕ ಬದ್ಧತೆಯನ್ನು ಇಡೀ ಸಮಾಜದ ಮುಂದೆ ಅನಾವರಣಗೊಳಿಸಿದೆ. ಹಿಂದೂ ಜಾಗರಣ ವೇದಿಕೆಯು ಯಾವುದೇ ಬೆಲೆ ತೆತ್ತಾದರೂ ಹಿಂದೂ ಸಮಾಜದ ರಕ್ಷಣೆಗೆ ಬದ್ಧವಾಗಿದ್ದು ಹಿಂದೂ ಕಾರ್ಯಕರ್ತರ ಮೇಲಿನ ದುರುದ್ದೇಶಪೂರಿತ ಮೊಕದ್ದಮೆಗಳನ್ನು ಸವಾಲಾಗಿಯೇ ಸ್ವೀಕರಿಸುತ್ತದೆ. ಮಾತ್ರವಲ್ಲದೇ ಕಾರ್ಯಕರ್ತರ ರಕ್ಷಣೆಗೂ ಬದ್ಧವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.