ಕಡಂಗ, ಜು. ೨೪: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಸುಗುಣ ಅವರ ದನದ ಕೊಟ್ಟಿಗೆಯು ಕಳೆದ ಮೂರು ದಿನಗಳ ಭಾರೀ ಮಳೆ - ಗಾಳಿಯಿಂದ ದನದ ಕೊಟ್ಟಿಗೆ ಯು ನೆಲಸಮವಾಗಿದ್ದು, ಕಂದಕಕ್ಕೆ ಬಿದ್ದ ಹಸುವನ್ನು ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.ಕೊಟ್ಟಿಗೆಯಲ್ಲಿದ್ದ ಎರಡು ಹಸುವಿನ ಕಾಲುಗಳು ಮುರಿದು ಹೋಗಿದೆ. ಈ ಬಡ ಕುಟುಂಬಕ್ಕೆ ಪರಿಹಾರಕ್ಕೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. -ನೌಫಲ್ ಕಡಂಗ