ಚೆಟ್ಟಳ್ಳಿ, ಜು. ೨೪: ಬೇಡವಾದ ಕಾಫಿ ಹೊಟ್ಟಿನ ಕಸವನ್ನು ಬಿಸಾಡುವ ಬದಲು ಕಸದಿಂದ ರಸವೆಂಬAತೆ ಅಮ್ಮತ್ತಿ ಸಮೀಪದ ಇಂಜಿಲಗೆರೆಯ ಅನಿತಾ ಮಣಿಲಾಲ್ ಕೆ.ಜಿ. ಗಟ್ಟಲೆ ಸೌತೆಕಾಯಿಯನ್ನು ಬೆಳೆಸಿ ಸೈ ಎನಿಸಿ ಕೊಂಡಿದ್ದಾರೆ.
ಮನೆಯ ಸುತ್ತಲೂ ಇರುವ ಖಾಲಿ ಜಾಗವನ್ನು ತರಕಾರಿ ಬೆಳೆಯುವ ಕೈತೋಟವನ್ನಾಗಿಸಿ ಬೀನ್ಸ್, ಅಲಸಂಡೆ, ಜೋಳ, ಮರಗೆಣಸು, ಸುವರ್ಣಗೆಡ್ಡೆ, ಹುತ್ತರಿ ಗೆಣಸು, ಎಲೆಕೋಸು, ಹೂಗೋಸು, ಸಾಸಿವೆ, ಬೆಳ್ಳುಳ್ಳಿ, ಟೋಮೋಟೊ, ಕುಂಬಳಕಾಯಿ, ಸಿಹಿಕುಂಬಳ, ತೊಂಡೆಕಾಯಿ ಹೀಗೆ ಹಲವು ಬಗೆ ಬಗೆಯ ತರಕಾರಿಗಳನ್ನು ಬೆಳೆಸುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ ಅನಿತ ಮಣಿಲಾಲ್.
ಈ ವರ್ಷ ಕಾಫಿ ಕೊಯಿಲು ಮುಗಿದು ಕಾಫಿಯನ್ನು ಒಣಗಿಸಿದ ನಂತರ ಶುಚಿಗೊಳಿಸಿದಾಗ ದೊರೆ ಯುವ ಕಾಫಿ ಹೊಟ್ಟು ಎಲೆಕಡ್ಡಿ ಯನ್ನೆಲ್ಲ ಸಂಗ್ರಹಿಸಿ ಕಲ್ಲುಗಳಿರುವ ಜಾಗದಲ್ಲಿ ಸುರಿದು ಹದಮಾಡಿ ಅದರಲ್ಲಿ ಸೌತೆಕಾಯಿಯ ಬೀಜವನ್ನು ಹೊಟ್ಟಿನಲ್ಲೇ ಬೆಳೆಯತೊಡಗಿಸಿ ದೊಡ್ದ ದೊಡ್ಡ ಗಾತ್ರದ ಸೌತೆಕಾಯಿ ಬೆಳೆಯ ತೊಡಗಿತು. ಇದರ ಸರಾಸರಿ ತೂಕವು ೩ ರಿಂದ ೪ ಕೆ.ಜಿ. ಇದೆ.
ಹತ್ತರಿಂದ ಹದಿನೈದು ಸೌತೆಕಾಯಿಯನ್ನು ಕುಯ್ದು ಪಕ್ಕದ ಮನೆಯವರಿಗೆ, ನೆಟರಿಷ್ಟರಿಗೆಲ್ಲ ನೀಡಿದ್ದಾರೆ. ಇನ್ನು ಹಲವು ಸೌತೆ ಕಾಯಿಗಳು ಕುಯಿಲಿಗೆ ಸಿದ್ಧವಾಗಿವೆ.
ಮನೆಯ ಸುತ್ತಲು ತರಕಾರಿ ಬೆಳೆಸುವ ಹವ್ಯಾಸವಿದ್ದು, ಕಳೆದ ಹತ್ತು ವರ್ಷಗಳಿಂದ ವಿವಿಧ ತರಹದ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಈ ವರ್ಷ ಕಾಫಿ ಹೊಟ್ಟಿನ ಕಸದಲ್ಲಿ ಸೌತೆಕಾಯಿಯನ್ನು ಬೆಳೆದಿದ್ದು ೨೫ಕ್ಕೂ ಅಧಿಕ ದೊಡ್ದ ಗಾತ್ರದ ಸೌತೆಕಾಯಿ ಗಳನ್ನು ಬೆಳೆಸಿರುವುದಾಗಿ ಅನಿತಾ ಮಣಿಲಾಲ್ ಹೇಳುತ್ತಾರೆ. ಈ ತರಕಾರಿಗಳನ್ನೇ ಹೆಚ್ಚಾಗಿ ಬಳಸಿ ವಿವಿಧ ಬಗೆಯ ಅಡುಗೆ ತಿಂಡಿತಿನಿ ಸನ್ನೂ ಮಾಡುವ ಮೂಲಕ ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. - ಕರುಣ್ ಕಾಳಯ್ಯ