ಮಡಿಕೇರಿ, ಜು. ೨೪: ಡ್ರಂ ಸೀಡರ್ನಿಂದ ಭತ್ತ ಬಿತ್ತನೆ ಮಾಡುವುದರಿಂದ ಎಕರೆಗೆ ಸುಮಾರು ೫ ರಿಂದ ೬ ಸಾವಿರ ರೂಪಾಯಿಗಳು ನಾಟಿ ಖರ್ಚು ಕಡಿಮೆಯಾಗಿ ಉತ್ತಮ ಬೆಳೆಯೊಂದಿಗೆ ಹೆಚ್ಚು ಇಳುವರಿ ಪಡೆಯಬಹುದು ಎಂದು ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿಯ ಡ್ರಂಸೀಡರ್ನಿAದ ಭತ್ತ ಬಿತ್ತನೆ ಪ್ರಾಯೋಜನೆಯ ಪ್ರಧಾನ ಸಂಶೋಧಕ ಡಾ. ಬಸವಲಿಂಗಯ್ಯ ತಿಳಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಭತ್ತ ಬಿತ್ತನೆಗೆ ಡ್ರಂಸೀಡರ್ ಬಳಸಿ ಕಗ್ಗೋಡ್ಲು ಗ್ರಾಮದ ಕೊಂಪುಳೀರ ಜಗದೀಶ್ ಮತ್ತು ಉದಯ್ರವರ ಸುಮಾರು ೨.೫ ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಅಭಾವದಿಂದ ಮತ್ತು ನಾಟಿ ಖರ್ಚಿನ ಹೆಚ್ಚಳದಿಂದ ಗದ್ದೆಗಳು ಕೊಡಗಿನಲ್ಲಿ ಪಾಳು ಬಿದ್ದಿವೆ, ಹಾಗಾಗಿ ಡ್ರಂ ಸೀಡರ್ ಭತ್ತ ಬಿತ್ತನೆ, ಭತ್ತದ ನಾಟಿ ಖರ್ಚಿನ ಉಳಿತಾಯದ ಜೊತೆಗೆ ಸುಮಾರು ೧೨ ರಿಂದ ೧೭ ಕೆ.ಜಿ. ಕಡಿಮೆ ಭತ್ತದ ಬೀಜದೊಂದಿಗೆ ಪ್ರದೇಶದಲ್ಲಿ ಭತ್ತ ಬಿತ್ತನೆ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಅಭಾವದಿಂದ ಮತ್ತು ನಾಟಿ ಖರ್ಚಿನ ಹೆಚ್ಚಳದಿಂದ ಗದ್ದೆಗಳು ಕೊಡಗಿನಲ್ಲಿ ಪಾಳು ಬಿದ್ದಿವೆ, ಹಾಗಾಗಿ ಡ್ರಂ ಸೀಡರ್ ಭತ್ತ ಬಿತ್ತನೆ, ಭತ್ತದ ನಾಟಿ ಖರ್ಚಿನ ಉಳಿತಾಯದ ಜೊತೆಗೆ ಸುಮಾರು ೧೨ ರಿಂದ ೧೭ ಕೆ.ಜಿ. ಕಡಿಮೆ ಭತ್ತದ ಬೀಜದೊಂದಿಗೆ ದಿನದಲ್ಲಿ ಕೋನೊ ವೀಡರ್ ಹಾಯಿಸುವುದರಿಂದ ಕಳೆ ನಿಯಂತ್ರಣದ ಜೊತೆಗೆ ಭತ್ತದ ಬೇರುಗಳಿಗೆ ಹೆಚ್ಚಿನ ಗಾಳಿ ದೊರೆಯುವಂತಾಗುತ್ತದೆ.
ಬೆಳೆಯ ಬುಡಕ್ಕೆ ಮಣ್ಣು ಸೇರುವುದರಿಂದ ಗಿಡ ಬೀಳದೆ ಸದೃಢವಾಗಿ ಬೆಳೆಯುತ್ತದೆ. ಇದರ ಜೊತೆಗೆ ಉದಯಪೂರ್ವ ಕಳೆನಶಕವಾದ ಬೆನ್ ಸಲ್ಫುರಾನ್ ಮಿಥೈಲ್ ಶೇ. ೦.೬ + ಪೆಟಿಲಾಕ್ಲೋರ್ ಶೇ. ೬ ಮತ್ತು ಉದಯೋತ್ತರ ಕಳೆನಾಶಕವಾದ ಬೆಸ್ಪಿರಿಬ್ಯಾಕ್ ಸೋಡಿಯಂ ಶೇ. ೧೦ ನಾಮಿನಿ ಗೋಲ್ಡನ್ನು ಬಳಸಿ ಕಳೆನಿಯಂತ್ರಿಸ ಬಹುದು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕೃಷಿಕರು ಭಾಗವಹಿಸಿ ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆದುಕೊಂಡರು.