*ಗೋಣಿಕೊಪ್ಪ, ಜು. ೨೩: ಕೊಡವ ತಕ್ಕ್ ಎಳ್ತ್ ಕಾರಡ ಕೂಟ ಹಾಗೂ ತೂಕ್‌ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಕೊಡಗಿನ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ತೋಲಂಡ ಪ್ರಭಾಚಂಗಪ್ಪ ಅವರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ತಾ.೨೮ರಂದು ಪೂರ್ವಾಹ್ನ ೧೦.೩೦ ಗಂಟೆಗೆ ವೀರಾಜಪೇಟೆ ಪುರಭವನದಲ್ಲಿ ನಡೆಯಲಿರುವ ಈ ಗಾನ ನಮನ ಕಾರ್ಯಕ್ರಮದಲ್ಲಿ ಗಾಯಕಿ ತೋಲಂಡ ಪ್ರಭಾಚಂಗಪ್ಪರವರು ಹಾಡಿದ ಕೊಡವ ಹಾಡನ್ನೇ ಪೈಪೋಟಿಯಲ್ಲಿ ಹಾಡಬೇಕು. ಹಿರಿಯ ಹಾಗೂ ಕಿರಿಯ ಎಂಬ ಎರಡು ವಿಭಾಗದ ಹಾಡು ಸ್ಪರ್ಧೆಯಲ್ಲಿ ವಿಜೇತರಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಭಾಗವಹಿಸಿದವರೆಲ್ಲರಿಗೂ ಮಾನ್ಯತೆ ಪತ್ರ ನೀಡಲಾಗುವುದು. ಜಾತಿ, ಧರ್ಮದ ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಎರಡೂ ಸಂಸ್ಥೆಯ ಪದಾಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ೯೮೮೦೫೮೪೭೩೨, ೯೪೮೦೫೫೬೬೬೭ ಸಂಪರ್ಕಿಸಬಹುದು.