ಕಡಂಗ, ಜು. ೨೨: ಕೆಪಿಸಿಸಿ ವಕ್ತಾರ ಹಾಗೂ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ಅವರು ಚೇರಂಬಾಣೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷಚೇತನರಿಗೆ ಮತ್ತು ಬಡವರಿಗೆ ಕೊಡವ ಸಮಾಜದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೆಪಿಸಿಸಿ ಸಂವಹನ ವಕ್ತಾರ ಬೇಕಲ್ ರಮಾನಾಥ್, ಬಾಲಚಂದ್ರ ನಾಯರ್ ಕರಿಕೆ, ಸೂರಜ್ ಹೊಸೂರು, ಚೆಟ್ಟಮಾನಿ ಹ್ಯಾರಿಸ್, ಚೇರಂಬಾಣೆ ಕಾಂಗ್ರೆಸ್ ಪಕ್ಷದ ವಲಯ ಅಧ್ಯಕ್ಷ ಕೆ.ಎಸ್. ತಮ್ಮಯ್ಯ, ಬೇಂಗೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಕೆ.ಕೆ. ಬಿಂದು ಮತ್ತು ಬಷೀರ್ ಕೆ.ಎಂ. ಹಾಜರಿದ್ದರು.

ಎ.ಎಸ್. ಪೊನ್ನಣ್ಣ ಮಾತನಾಡಿ, ಸಂಕಷ್ಟದ ಸಂದರ್ಭ ಸರಕಾರ ಮಾಡಬೇಕಾಗಿರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಇಂದು ಜನರ ಪರವಾಗಿ ಮಾಡುತ್ತಿದೆ. ಜನರು ಸಂಕಷ್ಟದಲ್ಲಿದ್ದಾಗ ಸದಾ ಕಾಂಗ್ರೆಸ್ ಪಕ್ಷ ಅವರ ಸೇವೆಗೆ ಸಿದ್ಧವಿರುವುದಾಗಿ ತಿಳಿಸಿದರು.

ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಯುವ ಮುಖಂಡ ನವೀನ್ ಮತ್ತು ಅಜಿತ್, ಶೇಖರ ನಿರ್ವಹಿಸಿದರು*.