ಮಡಿಕೇರಿ, ಜು. ೨೩ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಾಟ್ಪರಂಬು ಕೊಡವ ಹತ್ಯಾಕಾಂಡ ಸ್ಮಾರಕದಲ್ಲಿ ಅಗಲಿದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ೧೭೮೫ ಡಿಸೆಂಬರ್ ೧೨ ರಂದು ಟಿಪ್ಪು ನೇತೃತ್ವದಲ್ಲಿ ಸಹಸ್ರಾರು ಕೊಡವರನ್ನು ಮೋಸದಿಂದ ಹತ್ಯೆಮಾಡಲಾಗಿದ್ದು, ಹುತಾತ್ಮರಾದ ಹಿರಿಯರಿಗೆ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ತಾ.೨೩ ರಂದು ಪುಷ್ಪನಮನ ಸಲ್ಲಿಸಲಾಯಿತು. ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವಂತೆ ಹಾಗೂ ಇತರ ಬೇಡಿಕೆಗಳ ಪೂರೈಕೆಗೆ ಪ್ರಾರ್ಥಿಸಲಾಯಿತು.
ಈ ಸಂದರ್ಭ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಬೇಪಾಡಿಯಂಡ ದಿನು, ಬೇಪಾಡಿಯಂಡ ಬಿದ್ದಪ್ಪ ಹಾಜರಿದ್ದರು.