ಗೋಣಿಕೊಪ್ಪಲು. ಜು. ೨೨: ಗೋಣಿಕೊಪ್ಪ ಲಯನ್ಸ್ ಕ್ಲಬ್ ಅತ್ಯುತ್ತಮ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಾಜಿ ಜಿಲ್ಲಾ ಗವರ್ನರ್ ಚೆಪ್ಪುಡೀರ ಮುತ್ತಣ್ಣ ಅಭಿಪ್ರಾಯ ಪಟ್ಟರು. ಗೋಣಿಕೊಪ್ಪಲುವಿನ ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಲಯನ್ಸ್ ಕ್ಲಬ್ನ ಪದಗ್ರಹಣ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡಿದರು.
ಗೋಣಿಕೊಪ್ಪಲು ಲಯನ್ಸ್ ಕ್ಲಬ್ನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಾರುವಂಗಡ ಎಂ. ಜೀವನ್, ಪ್ರಧಾನ ಕಾರ್ಯದರ್ಶಿ ಮನ್ನಕ್ಕಮನೆ ಬಾಲಕೃಷ್ಣ, ಉಪಾಧ್ಯಕ್ಷರಾಗಿ ಸೋಮೆಯಂಡ ಪ್ರಣಿತ ಪೂಣಚ್ಚ, ಅಮ್ಮಂಡ ಚಿಣ್ಣಪ್ಪ, ಖಜಾಂಚಿಯಾಗಿ ಚೆಪ್ಪುಡೀರ ಬೋಪಣ್ಣ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ನಿರ್ದೇಶಕರುಗಳಾಗಿ ಜೆ. ಎಸ್. ಮಾದಪ್ಪ, ಪಿ. ಟಿ. ಸೋಮಯ್ಯ, ಸುನಿಲ್ ಅಲ್ಲುಮಾಡ, ಕೆ.ಎಸ್.ಚಂಗಪ್ಪ, ಕೆ. ಎಂ. ಅಯ್ಯಪ್ಪ, ಕೆ. ಪಿ. ಸುಬ್ಬಯ್ಯ, ಕೆ. ಎಂ. ಸುಬ್ಬಯ್ಯ, ಎಂ. ಎಂ. ಗಣಪತಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮ್ರಾನ್ ಶುಭಾಶ್, ಉತ್ತಯ್ಯ, ಕೆ. ಪಿ. ಸೋಮಣ್ಣ, ಮುಂತಾದವರು ಉಪಸ್ಥಿತರಿದ್ದರು. ಇಂದಿರಾ ಅಚ್ಚಯ್ಯ ಪ್ರಾರ್ಥಿಸಿ ಕೆ. ಪಿ. ಅಚ್ಚಯ್ಯ ಸ್ವಾಗತಿಸಿ, ಮನ್ನಕ್ಕಮನೆ ಬಾಲಕೃಷ್ಣ ವಂದಿಸಿದರು.