ಗೋಣಿಕೊಪ್ಪ ವರದಿ, ಜು. ೨೨: ಪಾಲಿಬೆಟ್ಟ ಹಾಗೂ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಸಹಯೋಗ ದಲ್ಲಿ ಪಾಲಿಬೆಟ್ಟ ಚೆಷೈರ್ ಹೋಂ ವಿಶೇಷಚೇತನ ಮಕ್ಕಳ ಶಾಲೆಯಲ್ಲಿ ಕೊರೊನಾ ಲಸಿಕಾ ಅಭಿಯಾನ ನಡೆಯಿತು. ಸುಮಾರು ೧೫೦ ಜನರಿಗೆ ಲಸಿಕೆ ನೀಡಲಾಯಿತು.

ವೈದ್ಯರಾದ ಡಾ ಗೋಪಿನಾಥ್, ಡಾ. ಲೋಹಿತ್, ಡಾ. ಜಗದೀಶ್ ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಲಸಿಕೆ ನೀಡಿದರು. ವೀರಾಜಪೇಟೆ ತಹಶೀಲ್ದಾರ್ ಯೋಗನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಅರವಿಂದ ಬಾಬು, ವಿಶೇಷಚೇತನ ಕಲ್ಯಾಣ ಅಧಿಕಾರಿ ವಿಮಲ, ಪಾಲಿಬೆಟ್ಟ ಚೆಷೈರ್ ಹೋಂ ಶಾಲೆ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚೆಂಗಪ್ಪ, ಮುಖ್ಯ ಶಿಕ್ಷಕ ಶಿವರಾಜ್ ಉಪಸ್ಥಿತರಿದ್ದರು.