ಸುಂಟಿಕೊಪ್ಪ, ಜು. ೨೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೇಲ್ಕೋ ಫೌಂಡೇಶನ್ ವತಿಯಿಂದ ಕರಕುಶಲ ಜೀವನಾದಾರಕ್ಕೆ ಕುಲಕಸುಬುಗಳಲ್ಲಿ ತೊಡಗಿರುವ ಮಂದಿಗೆ ಕಡಿಮೆ ದರದಲ್ಲಿ ಕುಲುಮೆ ಸೋಲಾರ್ ಯಂತ್ರವನ್ನು ನೀಡಲಾಯಿತು.
ಜೀವನ ಆಧಾರಕ್ಕಾಗಿ ಕುಲ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಕರಕುಶಲ ವೃತ್ತಿಯನ್ನು ನಿರ್ವಹಿಸುತ್ತಿ ರುವ ಮಂದಿಗೆ ಸೋಲಾರ್ ಕುಲುಮೆ ನೀಡಲಾಯಿತು. ಇದರಿಂದ ಕಾರ್ಮಿಕರ ಸಹಾಯ ಇಲ್ಲದೆ ತಮ್ಮ ವೃತ್ತಿಯನ್ನು ತಾವೇ ನಿರ್ವಹಿಸಿಕೊಳ್ಳ ಬಹುದಾಗಿದೆ ಎಂದು ಸೇಲ್ಕೋ ಸೋಲಾರ್ ಸಂಸ್ಥೆಯ ಮೇಲ್ವಿಚಾರಕ ಶಶಿಕುಮಾರ್ ಹೇಳಿದರು.
ಸೇಲ್ಕೋ ಫೌಂಡೇಶನ್ ಹಾಗೂ ಸೇಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ರಂಗಸಮುದ್ರ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮದ ರವೀಂದ್ರ ಆಚಾರ್ ಅವರ ತಯಾರಿಕಾ ಘಟಕ ಕೇಂದ್ರಕ್ಕೆ ಸೋಲಾರ್ ಕುಲುಮೆ ಯಂತ್ರವನ್ನು ಅಳವಡಿಸಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪುಷ್ಪಾಲತಾ ಇದ್ದರು.