ಮಡಿಕೇರಿ, ಜು.೨೩: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು ಇವರು ಐಟಿಐ ಪಾಸಾದ ಅಭ್ಯರ್ಥಿಗಳಿಂದ ಅಕ್ಟೋಬರ್-೨೦೨೧ ರ ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಪ್ರೆಂಟಿಷಿಪ್ ತರಬೇತಿಯನ್ನು ಫಿಟ್ಟರ್, ಟರ್ನರ್, ಮೆಶಿನಿಸ್ಟ್, ಎಲೆಕ್ಟಿçಷಿಯನ್, ವೆಲ್ಡರ್, ಸಿಒಪಿಎ ಫೌಂಡ್ರಿಮ್ಯಾನ್ ಹಾಗೂ ಶೀಟ್‌ಮೆಟಲ್ ವರ್ಕರ್ ವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಟ್ರೇಡ್‌ಗಳಲ್ಲಿ ಐಟಿಐ ತೇರ್ಗಡೆ ಹೊಂದಿರುವAತಹ ಅಭ್ಯರ್ಥಿಗಳು ತಿತಿತಿ. ಚಿಠಿಠಿಡಿeಟಿಣiಛಿeshiಠಿ.gov.iಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿ, ನೋಂದಣಿ ಸಂಖ್ಯೆಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ನಮೂದಿಸಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ, ತಾ. ೨೬ ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ (ದೂ.ಸಂ. ೦೮೨೭೨-೨೨೫೮೫೧) ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.