ಮಡಿಕೇರಿ, ಜು. ೨೧: ಕೊಡವಾಮೆರ ಕೊಂಡಾಟ ಸಂಘಟನೆಯು ಇದೇ ಪ್ರಥಮ ಬಾರಿಗೆ ಆಯೋಜಿಸಿರುವ ಕೊಡವ ಅಂತರ್ ಕುಟುಂಬಗಳ ನಡುವಿನ ಬಾಳೋ ಪಾಟ್ ಸ್ಪರ್ಧೆಗೆ ಒಟ್ಟು ೬೨ ಕುಟುಂಬಗಳು ನೋಂದಣಿ ಮಾಡುವುದರ ಮೂಲಕ, ಕೊಡವ ಜಾನಪದ ಇತಿಹಾಸದ ಮೂಲ ಬೇರಾದ ಬಾಳೋ ಪಾಟ್‌ನ ಪುನರುತ್ಥಾನಕ್ಕೆ ಕೈಜೋಡಿಸಿವೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕರೂ ಆಗಿರುವ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ತಿಳಿಸಿದ್ದಾರೆ.

ಕೊಡವಾಮೆರ ಕೊಂಡಾಟ ಸಂಘಟನೆಯು ‘ಅವ್ವಪಾಜೆರ ಉಳಿಕೆ ಬೊಳ್ಚೆಕಾಯಿತ್' ಎಂಬ ಧ್ಯೇಯದೊಂದಿಗೆ ಉದಯವಾಗಿ, ಎರಡು ವರ್ಷಗಳನ್ನು ಪೂರೈಸುತ್ತಿರುವ ಈ ಅವಧಿಯಲ್ಲಿ ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟನೆಯು ಆಯೋಜಿಸಿದೆ. ಇದೀಗ ಕೊಡವ ಇತಿಹಾಸದ ಮೂಲ ಬೇರಾಗಿರುವ ಹಾಗೂ ಸೃಷ್ಟಿಯ ಮೂಲದ ಉಲ್ಲೇಖವಿರುವ ಬಾಳೋಪಾಟ್ ಪ್ರತೀ ಕೊಡವ ಸದಸ್ಯನಿಗೂ ಅರಿವಿರಬೇಕು, ಹಾಗೂ ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಈ ಕೌಟುಂಬಿಕ ಬಾಳೋ ಪಾಟ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಾರಂಭಿಕ ವರ್ಷವಾದ್ದರಿಂದ ಕೇವಲ ಎಂಟರಿAದ ಹತ್ತು ತಂಡಗಳ ನಿರೀಕ್ಷೆ ಮಾಡಲಾಗಿತ್ತು ಆದರೆ ೬೨ತಂಡಗಳ ನೋಂದಣಿಯಿAದ ಕೊಡವ ಜಾನಪದ ಸಂಸ್ಕೃತಿ ಬಡವಾಗಿಲ್ಲ, ಇನ್ನೂ ಕೂಡ ಸಮೃದ್ಧವಾಗಿದೆ ಎನ್ನುವುದನ್ನು ಸಾರಿದಂತಾಗಿದೆ ಎಂದು ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.

ನೋಂದಾಯಿತ ತಂಡಗಳು ಆಗಸ್ಟ್ ೩೧ರ ಒಳಗಾಗಿ ಸಾಂಪ್ರದಾಯಿಕ ಕುಪ್ಯಚಾಲೆ ಧರಿಸಿ, ದುಡಿಸಹಿತ ೩೦ ನಿಮಿಷ ಮೀರದಂತೆ, ತಮಗೆ ತಿಳಿದಿರುವ ದೇಶಕೆಟ್ಟ್ (ಪಟ್ಟೋಲೆಪಳಮೆಯಲ್ಲಿ ಇರುವುದಷ್ಟೇ ಅಲ್ಲ) ಪಾಟನ್ನು ಹಾಡಿ ವೀಡೀಯೋ ರೆಕಾರ್ಡ್ ಮಾಡಿ ಪೈಪೋಟಿ ಸಂಚಾಲಕ ಕುಂಞರ ಗಿರೀಶ್‌ಬೀಮಯ್ಯ ಅವರ ೯೪೮೩೫೩೪೪೮೧ ಸಂಖ್ಯೆಗೆ ವಾಟ್ಸಾಪ್, ಮತ್ತು ಞoಜಚಿvಚಿmeಡಿಚಿಞoಟಿಜಚಿಚಿಣಚಿ@gmಚಿiಟ.ಛಿom ಗೆ ಈ ಮೈಲ್ ಮೂಲಕ ಕಳುಹಿಸಬೇಕು. ವೀಡಿಯೋದ ಆರಂಭದಲ್ಲಿ ತಮ್ಮ ಕುಟುಂಬದ ಹೆಸರು ಹಾಗೂ ಭಾಗವಹಿಸುವ ನಾಲ್ವರು ಸದಸ್ಯರ ಹೆಸರನ್ನು ಕಡ್ಡಾಯವಾಗಿ ಹೇಳಬೇಕು. ದೇಶಕೆಟ್ಟ್ ಪಾಟಿನ ವಿಷಯ, ಹಾಡಿನ ರಾಗ, ಶೈಲಿ, ದುಡಿಕೊಟ್ಟ್ ಸಾಮ್ಯತೆ, ಶಿಸ್ತು, ಸ್ಪರ್ಧೆಯ ಸಮಯ ಪಾಲನೆಗಳನ್ನು ಪರಿಗಣಿಸಿ ಒಟ್ಟು ೩೦ ಅಂಕಗಳಿಗೆ ತೀರ್ಪು ನೀಡಲಾಗುತ್ತದೆ. ೩೫ ನಾಡುಗಳಲ್ಲಿ ೦೩ ತಲೆನಾಡುಗಳಾದ ಮೇಂದಲೆ, ಕ್‌ಗ್ಗಟ್ಟ್, ಏಳ್‌ನಾಡ್ ಗಳಿಂದ ತಲಾ ಒಬ್ಬರಂತೆ ಮೂವರು ತೀರ್ಪುಗಾರರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ವೀಡಿಯೋ ವೀಕ್ಷಿಸುವುದರೊಂದಿಗೆ ತೀರ್ಪು ನೀಡಲಿದ್ದಾರೆ. ತೀರ್ಪುಗಾರಿಕೆಯನ್ನು ಸಾರ್ವಜನಿಕರು ಸಾಮಾಜಿಕ ಮಾದ್ಯಮದ ಮೂಲಕ ಲೈವ್ ವೀಕ್ಷಣೆಮಾಡುವ ವ್ಯವಸ್ಥೆ ಯನ್ನು ಕಲ್ಪಿಸಲಾಗುವುದೆಂದು ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ಹಾಗೂ ಸದಸ್ಯರು ತಿಳಿಸಿದ್ದಾರೆ.