ಮಡಿಕೇರಿ, ಜು. ೨೧: ರಾಜ್ಯ ತಂಬಾಕು ನಿಯಂತ್ರಣ ಕೋಶದ ಮಾರ್ಗಸೂಚಿ ಅನ್ವಯ ೨೦೨೧-೨೨ ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಕೋಟ್ಟಾ ೨೦೦೩ ರ ಕಾಯ್ದೆ (ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ ೨೦೦೩) ಸೆಕ್ಷನ್ ೪ ಹೋಟೆಲ್, ಬಾರ್ ಅಂಗಡಿ ಮತ್ತು ಪಾನ್ ಶಾಪ್‌ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. (೬೦* ೪೫ ನಾಮಫಲಕ ಕಡ್ಡಾಯವಾಗಿ ಅಳವಡಿಸುವುದು), (ಸೆಕ್ಷನ್ ೫) ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಟ್ಕಾ ಪ್ಯಾಕೆಟ್‌ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ (ಸೆಕ್ಷನ್ ೬ಎ) ೧೮ ವಯಸ್ಸಿನ ಒಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಅಪರಾಧ. ಸೆಕ್ಷನ್ ೬(ಬಿ) ಶಿಕ್ಷಣ ಸಂಸ್ಥೆಗಳ ೧೦೦ ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇದ, ಸೆಕ್ಷನ್-೭ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ಯಾಕುಗಳ ಮೇಲೆ ಶೇ.೮೫ ರಷ್ಟು ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದೆ ಮಾರಾಟ ಮಾಡುವ ಉತ್ಪನ್ನಗಳ ಮೇಲೆ ನಿಷೇಧ ಕಾನೂನು ಅನ್ವಯಗೊಳ್ಳುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.