ಸುAಟಿಕೊಪ್ಪ, ಜು. ೨೦: ಎರಡು ಪ್ರತ್ಯೇಕ ಗೋಮಾಂಸ ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚಿರುವ ಸುಂಟಿಕೊಪ್ಪ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಂಬಿಬಾಣೆಯ ಊರುಗುಪ್ಪೆ ಪೈಸಾರಿ ಎಂಬಲ್ಲಿ ಗೋಮಾಂಸ ಮಾರಾಟಕ್ಕೆ ಮುಂದಾಗಿದ್ದ ಅಲ್ಲಿನ ಸ್ಥಳೀಯರಾದ ಲತೀಫ್ ಹಾಗೂ ಶೌಕತ್ ಅಲಿ ಎಂಬವರುಗಳನ್ನು ಬಂಧಿಸಿ ೮ ಕೆ.ಜಿ. ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಗರಗಂದೂರಿನಲ್ಲಿ ಆಟೋದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಾದಾಪುರದ ರಶೀದ್ ಹಾಗೂ ಸುಂಟಿಕೊಪ್ಪದ ಅಬ್ಬಾಸ್ ಇವರುಗಳನ್ನು ಬಂಧಿಸಲಾಗಿದ್ದು ೩ಕೆ.ಜಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.x