ಮಡಿಕೇರಿ, ಜು. ೨೧: ಕೊಡವ ಜನಾಂಗದ ಕುಲಶಾಸ್ತç ಅಧ್ಯಯನಕ್ಕೆ ಸಂಬAಧಿಸಿದAತೆ ಇದಕ್ಕಾಗಿ ಈ ಹಿಂದೆ ನಿಯೋಜಿಸಲ್ಪಟ್ಟಿದ್ದ ಬುಡಕಟ್ಟು ಅಧ್ಯಯನ ಸಂಸ್ಥೆ ಸರಕಾರಕ್ಕೆ ಸಲ್ಲಿಸಿರುವ ವರದಿ ಸೂಕ್ತ ರೀತಿಯ ಮಾನದಂಡದ ಆಧಾರದಲ್ಲಿ ಸಲ್ಲಿಸಲ್ಪಟ್ಟಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಈ ವರದಿಯನ್ನು ಪರಿಗಣಿಸುವ ಮೊದಲು ಸೂಕ್ತ ಮಾನದಂಡಗಳನ್ನು ಅನುಸರಿಸಿ ಕುಲಶಾಸ್ತç ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ಗಮನಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಇದಕ್ಕೆ ಸಂಬAಧಿಸಿ ದಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ಹಾಗೂ ಇದರ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಯ ಕುರಿತಾಗಿ ನಿನ್ನೆ ನಡೆದ ವಿಚಾರಣೆ ಬಳಿಕ ನ್ಯಾಯಾಲಯ ಈ ಸೂಚನೆ ನೀಡಿದೆ.

ಈ ಹಿಂದೆ ಕೊಡವ ಜನಾಂಗ ವನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ಬೇಡಿಕೆ ಯಂತೆ ಈ ಜನಾಂಗಕ್ಕೆ ಇದರ ಅರ್ಹತೆ ಇದೆಯೇ ಎಂಬುದನ್ನು ಅರಿಯಲು ಕೊಡವ ಕುಲಶಾಸ್ತç ಅಧ್ಯಯನಕ್ಕೆ ಸರಕಾರ ಸೂಚನೆ ನೀಡಿದ್ದು, ಇದರ ಜವಾಬ್ದಾರಿಯನ್ನು ಬುಡಕಟ್ಟು ಅಧ್ಯಯನ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಈ ಸಂಸ್ಥೆಯ ನಿರ್ದೇಶಕ ಡಾ|| ಬಸವನಗೌಡ ಅವರು ಸೂಕ್ತ ಮಾನದಂಡ ಅನುಸರಿಸಿಲ್ಲ. ನಿರ್ದಿಷ್ಟವಾಗಿ ಕುಲಶಾಸ್ತç ಅಧ್ಯಯನದ ಬದಲಾಗಿ ಇದಕ್ಕೆ ಅರ್ಜಿ ನಮೂನೆಯೊಂದನ್ನು ಸಿದ್ಧಪಡಿಸಿ ಇದರಲ್ಲಿ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಂಶಗಳನ್ನು ವರದಿ ಮಾಡಲಾಗಿದೆ ಎಂಬದಾಗಿ ಅರ್ಜಿದಾರರು ಆಕ್ಷೇಪಣೆ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದ್ದರು. ಹಿರಿಯ ವಕೀಲರಾದ ಎ.ಎಸ್. ಪೊನ್ನಣ್ಣ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು. ಅಧ್ಯಯನದ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನೀಡಿರುವ ಪ್ರಶ್ನಾವಳಿ ಮತ್ತು ಅರ್ಜಿ ನಮೂನೆಯ ರದ್ಧತಿಗೆ ಅರ್ಜಿದಾರರು ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆದಿದ್ದು, ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶ ರಾದ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಸರಕಾರಕ್ಕೆ ಈ ಸೂಚನೆ ನೀಡಿದೆ.

ಈಗಾಗಲೇ ಅಧ್ಯಯನಕ್ಕೆ ಸಂಬAಧಿಸಿದ ವರದಿಯನ್ನು ಸಲ್ಲಿಸಲಾಗಿದೆ

(ಮೊದಲ ಪುಟದಿಂದ) ತಾ. ೫.೬.೨೦೨೧ರಂದು ರಾಜ್ಯ ಬುಡಕಟ್ಟು ಅಧ್ಯಯನ ಸಂಸ್ಥೆ ಸರಕಾರಕ್ಕೆ ವರದಿ ನೀಡಿರುವ ಅಂಶ ತಿಳಿದು ಬಂದಿದ್ದು, ಇದರ ಪರಿಶೀಲನೆಗೆ ಸರಕಾರಕ್ಕೆ ಇಡಲಾಗಿದೆ. ಆದರೆ ಕುಲಶಾಸ್ತç ಅಧ್ಯಯನವನ್ನು ಅದರ ನಿರ್ದಿಷ್ಟ ಮಾನದಂಡದ ಬದಲಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರವನ್ನು ಒಳಗೊಂಡAತೆ ನಡೆಸಿ ವರದಿಯನ್ನು ನೀಡಲಾಗಿದೆ. ಇದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಪೊನ್ನಣ್ಣ ಗಮನ ಸೆಳೆದಿದ್ದಾರೆ.

ಇದನ್ನು ಪರಿಗಣಿಸಿದ ನ್ಯಾಯಾಲಯ ಈ ವಿಚಾರದಲ್ಲಿ ಸರಕಾರ ಕೇವಲ ಈಗಿನ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಬಾರದು. ವರದಿಯನ್ನು ಒಪ್ಪುವ ಮುನ್ನ ಅಧ್ಯಯನ ನಡೆಸಲು ಈ ಹಿಂದೆ ೨೦೧೬ರ ಡಿ. ೧ ರಂದು ಹೊರಡಿಸಿದ ಆದೇಶದಲ್ಲಿ ವಿಧಿಸಿದ್ದ ಷರತ್ತು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಅಧ್ಯಯನ ನಡೆದಿದೆಯೇ ಎಂದು ಸರಕಾರ ಪರಿಶೀಲಿಸಬೇಕು ಇದು ಸಮರ್ಪಕವಿಲ್ಲದಿದ್ದಲ್ಲಿ ಮರು ಅಧ್ಯಯನ ನಡೆಸಬೇಕಾಗುತ್ತದೆ ಎಂದು ಸೂಚಿಸಿರುವದಾಗಿ ವಕೀಲ ಪೊನ್ನಣ್ಣ ಅವರು ಮಾಹಿತಿ ನೀಡಿದ್ದಾರೆ.

ನಾಚಪ್ಪ ಸ್ವಾಗತ

ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಈ ವಿಚಾರದಲ್ಲಿ ಸಂಘಟನೆ ಸಾಕಷ್ಟು ಹೋರಾಟ ನಡೆಸಿದೆ. ಕೇಂದ್ರ ಸರಕಾರ ಬುಡಕಟ್ಟು ಸ್ಥಾನಕ್ಕೆ ಸಂಬAಧಿಸಿದAತೆ ಅರ್ಹತೆಯ ಕುರಿತು ಪರಿಶೀಲನೆಗೆ ಕುಲಶಾಸ್ತç ಅಧ್ಯಯನಕ್ಕೆ ಸೂಚಿಸಿತ್ತು. ಆದರೆ ಇದಕ್ಕೆ ನಿಯೋಜಿತರಾಗಿದ್ದ ಸಂಸ್ಥೆಯ ಅಧ್ಯಕ್ಷರು ಸರಕಾರದ ನಿರ್ದೇಶನದ ಬದಲಾಗಿ ಜನಾಂಗದ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸಿದ್ದರು. ಬುಡಕಟ್ಟು ಸ್ಥಾನದ ಬೇಡಿಕೆಗೂ ಇದಕ್ಕೂ ಸಂಬAಧವಿಲ್ಲ. ಇದರಿಂದಾಗಿ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ ೨೧ ರಂದು ಸಂಘಟನೆ ಈ ಬಗ್ಗೆ ಮತ್ತೊಮ್ಮೆ ತಜ್ಞರು ಪ್ರಮುಖ ರಾಜಕಾರಣಿಗಳನ್ನು ಒಳಗೊಂಡ ವಿಚಾರ ಸಂಕಿರಣವೊAದನ್ನು ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.