ಕಣಿವೆ, ಜು. ೨೦: ಕೂಡಿಗೆಯ ಹಾರಂಗಿ ನದಿ ದಂಡೆಯ ಮೇಲಿರುವ ಕೋವಿಡ್ ಸೋಂಕಿತರ ಆರೈಕೆ ಕೇಂದ್ರಕ್ಕೆ ೬ ಕಿಮೀ ದೂರದ ಕುಶಾಲನಗರ ಕಾವೇರಿ ನದಿ ದಂಡೆಯ ಮೇಲಿನ ವಸತಿ ನಿಲಯವೊಂದರಿAದ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಊಟ, ಫಲಹಾರ ಹಾಗೂ ಬಿಸಿ ಬಿಸಿ ಪಾನೀಯಗಳನ್ನು ನಿತ್ಯವೂ ಆಟೋ ಮೂಲಕ ಸಾಗಿಸಲಾಗುತ್ತಿದೆ.
ಇದೀಗ ಕೇಂದ್ರದಲ್ಲಿ ೫೦ ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ದಿನದ ಮೂರು ಹೊತ್ತು ಕೂಡ ಊಟೋಪಹಾರಗಳನ್ನು ಪ್ರತೀ ಸೋಂಕಿತರಿಗೆ ಪ್ರತ್ಯೇಕವಾಗಿಯೇ ಕೊಡಲಾಗುತ್ತಿದೆ.
ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಈ ಆರೈಕೆ ಕೇಂದ್ರದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗೊಂಡಿದ್ದಾಗ ಅತ್ಯಧಿಕ ಅಂದರೆ ೩೫೦ ಮಂದಿ ಸೋಂಕಿತರು ಇಲ್ಲಿ ದಾಖಲಾಗಿದ್ದ ಬಗ್ಗೆ ಹೇಳುವ ಅಡುಗೆ ಸಿಬ್ಬಂದಿಗಳು ಈಗ ಸದ್ಯ ೫೦ ಮಂದಿ ಸೋಂಕಿತರು ಇದ್ದಾರೆ. ಅವರಿಗೆಲ್ಲಾ ಅಡುಗೆಯವರಾದ ನಾವು ತುಂಬಾ ಕಾಳಜಿ ಹಾಗೂ ಪ್ರೀತಿಯಿಂದ ಆಯಾಯ ದಿನಕ್ಕೆ ನಿಗದಿಪಡಿಸಿದ ಮೆನುವಿನಂತೆ ಆಹಾರ ಸಿದ್ಧಪಡಿಸುತ್ತೇವೆ. ಜಿಲ್ಲೆಯ ಬೇರೆ ಬೇರೆ ಕಡೆ ಇರುವ ಕಾಳಜಿ ಕೇಂದ್ರಗಳಲ್ಲಿ ಅಡುಗೆ ಶುಚಿ-ರುಚಿಗೆ ಸಂಬAಧಿಸಿದAತೆ ದೂರುಗಳು ಕೇಳಿ ಬಂದರೂ ಕೂಡ ಕೂಡಿಗೆಯ ನಮ್ಮ ಕೇಂದ್ರದಲ್ಲಿ ಇದೂವರೆಗೂ ಯಾರಿಂದಲೂ ಯಾವ ದೂರುಗಳು ಕೇಳಿಬಾರದಂತೆ ಶ್ರದ್ಧೆ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇವೆ. ಈಗಲೂ ಅದನ್ನೇ ಮುಂದುವರೆಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಅಡುಗೆ ಸಿಬ್ಬಂದಿ.