ಮುಳ್ಳೂರು, ಜು. ೨೦: ರೋಟರಿ ಕ್ಲಬ್ ಸದಸ್ಯರು, ಸಮಾಜದಲ್ಲಿ ಗುರುತರ ಸ್ಥಾನಮಾನಗಳಿಸುವುದರ ಜೊತೆಯಲ್ಲಿ ಸಮಾಜ ಮತ್ತು ದೇಶವನ್ನು ಅಭಿವೃದ್ಧಿ ಪಡಿಸುವ ಮೂಲಕ ಸಮಾಜ ಮುಖೇನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿ ರೋಟರಿ ಕ್ಲಬ್ ಜಿಲ್ಲಾ ಉಪ ರಾಜ್ಯಪಾಲ ಪಿ.ಕೆ.ರವಿ ಅಭಿಪ್ರಾಯ ಪಟ್ಟರು. ಅವರು ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್‌ನ ೨೦೨೧-೨೨ನೇ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆ ಸಮಾಜ ಸೇವೆಯ ಜೊತೆಯಲ್ಲಿ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು. ಕೋವಿಡ್ ಬಗ್ಗೆ ಜನ ಜಾಗೃತಿ, ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಜಾಗೃತಿಗೊಳಿಸುತ್ತಿದೆ, ಪರಿಸರ, ಆರೋಗ್ಯ, ಶಿಕ್ಷಣವನ್ನು ಪ್ರೋತ್ಸಾಹಿಸು ತ್ತಿದೆ, ಹಳ್ಳಿಗಳಲ್ಲಿ ಕಾಡಾನೆ ಹಾವಳಿ ತಪ್ಪಿಸಲು ರೋಟರಿ ಸಂಸ್ಥೆ ಅರಣ್ಯ ಇಲಾಖೆ ಜೊತೆಗೂಡಿ ಅರಣ್ಯದಲ್ಲಿ ಬಿದಿರು ಮುಂತಾದ ಕಾಡಾನೆಗಳಿಗೆ ಆಹಾರವಾಗುವಂತೆ ಗಿಡಮರಗಳನ್ನು ಬೆಳೆಸಲು ಯೋಜನೆ ಹಮ್ಮಿಕೊಂಡಿದೆ ಎಂದರು. ರೋಟರಿ ಕ್ಲಬ್ ವಲಯ ಮಾತನಾಡಿದರು. ರೋಟರಿ ಸಂಸ್ಥೆ ಸಮಾಜ ಸೇವೆಯ ಜೊತೆಯಲ್ಲಿ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು. ಕೋವಿಡ್ ಬಗ್ಗೆ ಜನ ಜಾಗೃತಿ, ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಜಾಗೃತಿಗೊಳಿಸುತ್ತಿದೆ, ಪರಿಸರ, ಆರೋಗ್ಯ, ಶಿಕ್ಷಣವನ್ನು ಪ್ರೋತ್ಸಾಹಿಸು ತ್ತಿದೆ, ಹಳ್ಳಿಗಳಲ್ಲಿ ಕಾಡಾನೆ ಹಾವಳಿ ತಪ್ಪಿಸಲು ರೋಟರಿ ಸಂಸ್ಥೆ ಅರಣ್ಯ ಇಲಾಖೆ ಜೊತೆಗೂಡಿ ಅರಣ್ಯದಲ್ಲಿ ಬಿದಿರು ಮುಂತಾದ ಕಾಡಾನೆಗಳಿಗೆ ಆಹಾರವಾಗುವಂತೆ ಗಿಡಮರಗಳನ್ನು ಬೆಳೆಸಲು ಯೋಜನೆ ಹಮ್ಮಿಕೊಂಡಿದೆ ಎಂದರು. ರೋಟರಿ ಕ್ಲಬ್ ವಲಯ ಕ್ಲಬ್ ವಲಯ ಕಾರ್ಯದರ್ಶಿ ಎಚ್.ಎಸ್.ವಸಂತ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್ ಮಾತನಾಡಿದರು. ಸಮಾರಂಭದಲ್ಲಿ ನೂತನ ಕಾರ್ಯದರ್ಶಿ ಹೆಚ್.ಜೆ. ಲೋಕೇಶ್, ನಿಕಟಪೂರ್ವ ಕಾರ್ಯದರ್ಶಿ ಎ.ಎನ್.ತ್ಯಾಗರಾಜ್, ರೋಟರಿ ಸದಸ್ಯರಾದ ಎಸ್.ಜೆ. ಪ್ರಸನ್ನಕುಮಾರ್, ಹೆಚ್.ಕೆ.ಕಿರಣ್, ಎಚ್.ಎಂ.ಹೇಮAತ್, ಎಂ.ಕೆ.ಲತೇಶ್, ಮನೋಹರ್, ಕೆ.ವಿ.ರಾಯ್, ಎಂ.ಟಿ.ಬೇಬಿ, ಮಧುಶಂಕರ್, ಬಿ.ಎಚ್.ಆನಂದ್, ಹೊಸೊಕ್ಲು ಕುಶ, ತೇನನ ಜೀವನ್, ಹೊಸೂರು ಶಿವಪ್ರಕಾಶ್, ಹುಲಿಮನೆ ಮಧು, ಪುದಿಯನೇರವನ ಭರತ್, ತೇನನ ಸಂಪತ್ ಹಾಗೂ ಇತರರಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು.