ಕಣಿವೆ, ಜು. ೨೦: ವಾಸದ ಮನೆಯೊಂದರ ಬಾಗಿಲು ಮುರಿದು ನುಗ್ಗಿ ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಕುಶಾಲನಗರದ ಹಳೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಯಶೋಧ (ಪ್ರೇಮ) ಎಂಬವರ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿರುವ ಕಳ್ಳರು, ಯಶೋಧ ಅವರು ವಾಸವಿದ್ದ ಮಹಡಿ ಮನೆಯ ಚಿಲಕವನ್ನು ಹೊರಗಿನಿಂದ ಹಾಕಿ ಕೆಳ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾರೆ.

ಆದರೆ ಮನೆಯಲ್ಲಿ ನಗ ನಾಣ್ಯ ಇಲ್ಲದ್ದರಿಂದ ಖದೀಮರು ಬರಿಗೈಲಿ ಹಿಂದಿರುಗಿದ್ದಾರೆ. ಬೆಳಿಗ್ಗೆ ಎಂದಿನAತೆ ಬಾಗಿಲು ತೆರೆದು ಹೊರಗೆ ಬಾಗಿಲ ಚಿಲುಕ ಹಾಕಿದ್ದನ್ನು ಗಮನಿಸಿದ ಯಶೋಧ ಪಕ್ಕದ ಮನೆಯವರ ಸಹಾಯದಿಂದ ಹೊರ ಬಂದು ಕೆಳ ಮನೆಯನ್ನು ಗಮನಿಸಿದಾಗ ಬಾಗಿಲ ಚಿಲಕ ಮುರಿದು ಕಳ್ಳರು ಒಳ ನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಬ್‌ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಹಾಯಕ ಸಬ್‌ಇನ್ಸ್ಪೆಕ್ಟರ್ ಗೋಪಾಲ್ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

ಇತ್ತೀಚಿಗೆ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಟೈರ್‌ಗಳ ಕಳವು, ಪಟ್ಟಣ ಪಂಚಾಯಿತಿ ಶೆಡ್‌ನಲ್ಲಿ ಟ್ರಾö್ಯಕ್ಟರ್ ಬ್ಯಾಟರಿ ಕಳವು ಸೇರಿದಂತೆ ಇನ್ನಿತರೆ ಪ್ರಕರಣಗಳು ನಡೆಯುತ್ತಲೆ ಇರುವುದರಿಂದ ಪೊಲೀಸರು ರಾತ್ರಿ ಪಾಳಿಯಲ್ಲಿ ಗಸ್ತು ತಿರುಗಿ ರಕ್ಷಣೆ ಒದಗಿಸಬೇಕು ಎಂದು ಪಂಚಾಯಿತಿ ಸದಸ್ಯೆ ಜಯಲಕ್ಷಿö್ಮ ನಂಜುAಡಸ್ವಾಮಿ ಆಗ್ರಹಿಸಿದ್ದಾರೆ.