ಮಡಿಕೇರಿ, ಜು. ೨೦: ಪ್ರಾಕೃತಿಕ ವಿಕೋಪಗಳಾದ ನೆರೆಹಾವಳಿ, ಭೂಕುಸಿತ ಮತ್ತಿತರ ಅಪಾಯದ ಸಂದರ್ಭಗಳಲ್ಲಿ ತಕ್ಷಣ ಮಡಿಕೇರಿ, ಜು. ೨೦: ಪ್ರಾಕೃತಿಕ ವಿಕೋಪಗಳಾದ ನೆರೆಹಾವಳಿ, ಭೂಕುಸಿತ ಮತ್ತಿತರ ಅಪಾಯದ ಸಂದರ್ಭಗಳಲ್ಲಿ ತಕ್ಷಣ ಜಿಲ್ಲಾ ಸಮಿತಿಯ ಆಮಿಲ ತುರ್ತುಸೇವಾ ತಂಡಕ್ಕೆ ತರಬೇತಿ ನೀಡಿದರು.
ಸಿದ್ದಾಪುರದ ಮದರಸ ಸಭಾಂಗಣದಲ್ಲಿ ಎಸ್‌ವೈಎಸ್ ಜಿಲ್ಲಾ ಸಮಿತಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ತಂಡದ ಸುಮಾರು ೧೦೦ ಕಾರ್ಯಕರ್ತರಿಗೆ ಅಗತ್ಯ ಮಾಹಿತಿ ಗಳನ್ನು ಒದಗಿಸಲಾಯಿತು.
ತರಬೇತಿ ಶಿಬಿರವನ್ನು ಕೊಡಗು ಜಿಲ್ಲೆಯ ಉಪ ಖಾಝಿ ಅಬ್ದುಲ್ಲಾ ಫೈಜಿ ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಉಮ್ಮರ್ ಫೈಜಿ, ತುರ್ತುಸೇವಾ ತಂಡದ ಜಿಲ್ಲಾ ನಾಯಕ ಸಿ.ಎಂ. ಹಮೀದ್ ಮೌಲವಿ, ನೌಫಲ್ ಹುದವಿ, ರಫೀಕ್ ಕೆ.ಐ, ಸುಂಟಿಕೊಪ್ಪ ವಲಯದ ನಾಯಕ ಮಾಹಿನ್ ಹಾಜಿ ಎಮ್ಮೆಮಾಡು, ಅಬ್ದುಲ್ ಕರೀಂ ಸಿದ್ದಾಪುರ, ಮಾಹಿನ್ ದಾರಿಮಿ ವೀರಾಜಪೇಟೆ, ಮೊಹ ಮ್ಮದ್ ಅಲಿ ಗೋಣಿಕೊಪ್ಪ, ಮುಸ್ತಫ ಹಾಜಿ ಸಿದ್ದಾಪುರ, ಅಬ್ದುಲ್ ರಜಾ಼ಕ್ ವೀರಾಜಪೇಟೆ ಮತ್ತಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.