ಮಡಿಕೇರಿ, ಜು. ೨೦: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ದೆಹಲಿಗೆ ತೆರಳಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಬಸವೇಗೌಡ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ವಾಣಿಜ್ಯ ಸಚಿವಾಲಯದ ವಾಣಿಜ್ಯ ಕಾರ್ಯದರ್ಶಿ ಬಿ.ವಿ.ಆರ್. ಸುಬ್ರಮಣ್ಯಂ, ವಾಣಿಜ್ಯ ಜಂಟಿ ಕಾರ್ಯದರ್ಶಿ ದಿವಾಕರನಾಥ್ ಮಿಶ್ರಾ, ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿ ನಕುಲ್ ಇವರುಗಳನ್ನು ಭೇಟಿಮಾಡಿ, ಕಾಫಿ ಕೃಷಿ ಸಂಬAಧಿತ ಸಾಲವನ್ನು ಸರ್ಪೇಜಿ-೨೦೦೨ರ ಕಾಯ್ದೆಯಿಂದ ಹೊರಗಿಡಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಪ್ಲಾಂಟೇಷನ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕಿಸಿಕೊಡಲು, ಸಾಲದ ಖಾತೆಗಳ ಮರುಹೊಂದಾಣಿಕೆಗೆ, ಫಸಲ್ ಭೀಮಾ ಯೋಜನೆಯನ್ನು ಕಾಫಿ ಕೃಷಿಗೂ ಅನ್ವಯಿಸುವಂತೆ ಮತ್ತು ಎಲ್ಲಾ ರೀತಿ ಕೃಷಿ ಸಾಲಗಳನ್ನು ಸಿಬಿಲ್‌ನಿಂದ ಹೊರಗಿಡುವಂತೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಸಾರ್ವಜನಿಕ ಸಂಪರ್ಕ ಪ್ರತಿನಿಧಿ ಟಿ.ಪಿ. ಸುರೇಂದ್ರ ತಿಳಿಸಿದ್ದಾರೆ.