ಮಡಿಕೇರಿ, ಜು. ೨೦ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ೭೦ ನೇ ಜನ್ಮ ದಿನಾಚರಣೆ ಪ್ರಯುಕ್ತ ಕುಶಾಲನಗರ ತಾಲೂಕಿನ ಬಾಳೆಗುಂಡಿ ಜೇನುಕುರುಬ ಗಿರಿಜನ ಹಾಡಿಯ ಆದಿವಾಸಿ ಕುಟುಂಬಗಳಿಗೆ ವಿ.ಸೋಮಣ್ಣ ಅಭಿಮಾನಿ ಬಳಗದಿಂದ ಮಂಗಳವಾರ ಟಾರ್ಪಲ್ ವಿತರಿಸಲಾಯಿತು.

ಶಾಸಕ ಎಂ.ಪಿ.ಅಪ್ಪಚ್ಚುರAಜನ್, ಪತ್ರಕರ್ತರು ಹಾಗೂ ಕೃಷಿಕÀ ಚಿನ್ನಸ್ವಾಮಿ ವಡ್ಡಗೆರೆ, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಸಿ.ಶಿವಕುಮಾರ್ ಇತರರು ಟಾರ್ಪಲ್ ವಿತರಿಸಿದರು. ಬಳಿಕ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರು, ಬಾಳೆಗುಂಡು ಗಿರಿಜನ ಹಾಡಿಗೆ ರಸ್ತೆ ಸೇರಿದಂತೆ ಹಲವು ಮೂಲ ಸೌಲಭ್ಯ ಕಲ್ಪಿಸುವ ಸಂಬAಧ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿದ್ದು, ಈ ಬಗ್ಗೆ ಸರ್ಕಾರದ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದರಿAದ ಮೂಲ ಸೌಲಭ್ಯ ಕಲ್ಪಿಸಲು ಕಷ್ಟಸಾಧ್ಯವಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಹಾಗೂ ಕೃಷಿಕರಾದ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರ ೭೦ ನೇ ಜನ್ಮ ದಿನಾಚರಣೆ ಪ್ರಯುಕ್ತ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅತ್ಯಂತ ಹಿಂದುಳಿದ, ಕಡುಬಡತನದಲ್ಲಿ ಬದುಕು ಸವೆಸುತ್ತಿರುವ ಆದಿವಾಸಿ ಹಾಡಿಯ ಗಿರಿಜನರನ್ನು ಗುರುತಿಸಿ ಬಾಳೆಗುಂಡಿಯ ೧೦೦ ಆದಿವಾಸಿ ಕುಟುಂಬಗಳಿಗೆ ಟಾರ್ಪಲ್ ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.

ಬಳಿಕ ಮಕ್ಕಳಿಗೆ ಸಿಹಿ ಹಂಚಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಅಧಿಕಾರಿ ಎಂ.ಕೆ.ಸ್ವಾಮಿ, ವಿ.ಸೋಮಣ್ಣ ಅಭಿಮಾನಿ ಬಳಗದ ಸಂಚಾಲಕರಾದ ಎಸ್.ಪಿ.ಮಧು, ಜಯಶಂಕರ್ ಜೀಮಾರಳ್ಳಿ, ಹೇಮ ಶಂಕರ್, ಕೆ.ಎನ್.ದಯಾಶಂಕರ್, ಬಿಲ್ವ ಮಹೇಶ್ ಇತರರು ಇದ್ದರು.

ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಸದಸ್ಯರಾದ ಕೆ.ಆರ್. ಮಂಜುಳ, ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷರು, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಇತರರು ಇದ್ದರು.