ಆರೋಪಿಯ ಬಂಧನ

ವೀರಾಜಪೇಟೆ, ಜು. ೨೧ : ಅಕ್ರಮವಾಗಿ ಗೋಹತ್ಯೆ ಮಾಡಿದ ಮಾಂಸ ಮಾರಾಟ ಮಾಡಲು ಯತ್ನಿಸಿದಾತನನ್ನು ಬಂಧಿಸಲಾಗಿದೆ.

ಪೊನ್ನAಪೇಟೆ ತಾಲೂಕು ಪೊನ್ನಂಪೇಟೆ ಶಿವನಗರದ ನಿವಾಸಿ ದಿ. ಮೊಯ್ದು ಎಂಬವರ ಪುತ್ರ ಬಾವ ಪಿ. (೫೩) ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲು ಯತ್ನಿಸಿ ಬಂಧಿತನಾದ ವ್ಯಕ್ತಿ.

ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಬಿ. ಬಾಣಸೆ ಮತ್ತು ಸಿಬ್ಬಂದಿಗಳು ನಲ್ವತೊಕ್ಲು ಪ್ರಯಾಣಿಕ ತಂಗುದಾಣದ ಬಳಿ ವಾಹನಗಳನ್ನು ತಪಾಸಣೆ ನಡೆಸಿದ ಸಂದರ್ಭ ಹಿಂಬದಿ ಆಸನದಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಗೋಮಾಂಸ ಪತ್ತೆಯಾಗಿದೆ. ಸುಮಾರು ೧೦ ಕೆ.ಜಿ ಗೋಮಾಂಸ ಇರುವುದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನ (ಕೆಎ೧೨.ಬಿ.೨೫೫೧) ಮತ್ತು ಮಾಂಸವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿ ಬಾವ ಪಿ. ಎಂಬಾತನ ಮೇಲೆ ೧೯೬೪ರ ಕಲಂ ೦೪ ರಂತೆ ಕರ್ನಾಟಕ ಗೋಹತ್ಯೆ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಯಾಂಗ ಬಂಧನದಲ್ಲಿಡುವAತೆ ಆದೇಶವಾಗಿದೆ. - ಕೆ.ಕೆ.ಎಸ್.