ಕುಶಾಲನಗರ, ಜು. ೧೯: ಹಾರಂಗಿ ಜಲಾಶಯದ ಹೊರ ಆವರಣದಲ್ಲಿರುವ ಉದ್ಯಾನವನ ವೀಕ್ಷಣೆಗೆ ಭಾನುವಾರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ದೃಶ್ಯ ಕಂಡುಬAತು. ಜಲಾಶಯದಿಂದ ನದಿಗೆ ನೀರು ಹರಿಯುತ್ತಿರುವ ದೃಶ್ಯ ವೀಕ್ಷಿಸಲು ನೆರೆಯ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಜನರು ಆಗಮಿಸಿದ್ದರು.

ಭಾನುವಾರ ಒಂದೇ ದಿನದಲ್ಲಿ ಅಂದಾಜು ೩ ಸಾವಿರಕ್ಕೂ ಅಧಿಕ ಮಂದಿ ಹಾರಂಗಿಗೆ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ. ನೂರಾರು ವಾಹನಗಳು ಎಲ್ಲೆಂದರಲ್ಲಿ ನಿಲುಗಡೆಗೊಂಡು ಸಮರ್ಪಕ ಸಂಚಾರ ವ್ಯವಸ್ಥೆಗೂ ತೊಡಕುಂಟಾಯಿತು. ಪ್ರವೇಶ ದ್ವಾರದಲ್ಲಿ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲು ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದಿರುವುದು ಕಂಡುಬAತು.

ಹಾರಂಗಿ ವಿಶೇಷ ಭದ್ರತಾ ಪಡೆಯ ಸಿಬ್ಬಂದಿ ಮಳೆಯಲ್ಲಿಯೇ ದಿನವಿಡೀ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಬೇಕಾದ ಸ್ಥಿತಿ ಎದುರಾಯಿತು. ಮಹಿಳೆಯರ ತಪಾಸಣೆಗೆ ಕೂಡಾ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ್ಲ. ಈ ಹಿನ್ನೆಲೆಯಲ್ಲಿ ಅವಶ್ಯಕತೆ ಇರುವ ಸ್ವಾಗತ ಕಚೇರಿ, ಟಿಕೆಟ್ ಕೌಂಟರ್ ಕಟ್ಟಡದ ನಿರ್ಮಾಣ ಮಾಡುವಂತೆ ಪ್ರವಾಸಿಗರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ.

ಅಣೆಕಟ್ಟು ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಕ್ಷಣ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.

-ಸಿಂಚು