ಗೋಣಿಕೊಪ್ಪಲು, ಜು. ೧೯: ವಿಪರೀತ ಗಾಳಿ, ಮಳೆಯಿಂದಾಗಿ ೬೬ ಕೆ.ವಿ. ವಿದ್ಯುತ್ ತಂತಿ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಗೋಣಿಕೊಪ್ಪ ಚೆಸ್ಕಾಂ ವ್ಯಾಪ್ತಿಯ ಮಾಯಮುಡಿ, ಕಲ್ತೋಡು ಸಮೀಪ ಸೋಮವಾರ ಮುಂಜಾನೆ ಮೂರು ಗಂಟೆ ವೇಳೆ ಮರವೊಂದು ಉರುಳಿ ಬಿದ್ದಿದೆ. ಇದರಿಂದಾಗಿ ನಗರ ಪ್ರದೇಶ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗಿತ್ತು.

ಗೋಣಿಕೊಪ್ಪ ಚೆಸ್ಕಾಂ ಇಂಜಿನಿಯರ್ ಕೃಷ್ಣ ಕುಮಾರ್ ಹಾಗೂ ಸಿಬ್ಬಂದಿಗಳು, ಕುಶಾಲನಗರದ ವಿದ್ಯುತ್ ಸಿಬ್ಬಂದಿ ಒಟ್ಟಾಗಿ ೬೬ ಕೆ.ವಿ. ಮೇಲಿದ್ದ ಮರವನ್ನು ಕತ್ತರಿಸಿ ತೆಗೆದು ವಿದ್ಯುತ್ ತಂತಿಗಳನ್ನು ಸರಿಪಡಿಸಿದರು ನಂತರ ವಿದ್ಯುತ್ ಪೂರೈಕೆ ಮಾಡಲಾಯಿತು.