*ಗೋಣಿಕೊಪ್ಪ, ಜು. ೧೯: ಪೊನ್ನಂಪೇಟೆ ತಾಲೂಕು ಕಚೇರಿ ಆಡಳಿತಕ್ಕೆ ಮಿನಿ ವಿಧಾನಸೌಧದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಮುಂದಿನ ಫೆಬ್ರವರಿ ತಿಂಗಳ ಬಜೆಟ್‌ನಲ್ಲಿ ಅನುದಾನ ಘೋಷಣೆ ಯಾಗಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದಾರೆ.
ರೂ. ೧೮ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಬಾಳೆಲೆ ಹೋಬಳಿಯ ಕಂದಾಯ ಇಲಾಖೆಯ ನೂತನ ನಾಡಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊನ್ನಂಪೇಟೆ ತಾಲೂಕು ಘೋಷಣೆಯಾದ ನಂತರ ಪ್ರಥಮವಾಗಿ ತಾಲೂಕಿನಲ್ಲಿ ಕಂದಾಯ ಇಲಾಖೆಯ ನಾಡಕಚೇರಿ ಬಾಳೆಲೆ ಹೋಬಳಿಯಲ್ಲಿ ನಿರ್ಮಿಸಲಾಗಿದೆ. ಶ್ರೀಮಂಗಲ ಮತ್ತು ಹುದಿಕೇರಿ ಹೋಬಳಿಯಲ್ಲಿಯೂ ನಾಡಕಚೇರಿ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಘೋಷಣೆಯಾದ ತಕ್ಷಣವೇ ಎಲ್ಲಾ ವ್ಯವಸ್ಥೆಗಳನ್ನು ಸರಿದೂಗಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಪೊನ್ನಂಪೇಟೆ ತಾಲೂಕಿನಲ್ಲಿ ಕಾರ್ಯನಿರ್ವಹಿಸಲು ಇಲಾಖೆಗಳಿಗೆ ವ್ಯವಸ್ಥೆ ಮಾಡಲಾ ಗುತ್ತಿದೆ. ಉತ್ತಮ ಮತ್ತು ಜನಪರ ಕಾಳಜಿ ಹೊಂದಿರುವ ತಹಶೀಲ್ದಾರ್ ಅವರನ್ನು ನೇಮಿಸ ಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸ ಲಾಗಿದ್ದು, ಪೊನ್ನಂಪೇಟೆ ತಾಲೂಕಿನಲ್ಲಿ ಪಾರದರ್ಶಕತೆಯಿಂದ ಸೇವೆ ಸಲ್ಲಿಸಲು ಕೆಲದಿನಗಳಲ್ಲಿಯೇ ಗ್ರೇಡ್ ೧ ತಹಶೀಲ್ದಾರ್ ನೇಮಕಗೊಳ್ಳಲಿದ್ದಾರೆ ಎಂದು ಬೋಪಯ್ಯ ತಿಳಿಸಿದರು.
ಈಗಾಗಲೇ ಪೊನ್ನಂಪೇಟೆಯಲ್ಲಿ ಬಹಳಷ್ಟು ಇಲಾಖೆಗಳು ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತಾಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಕೆಲವು ಇಲಾಖೆಗಳು ಈ ಭಾಗದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕಾಗಿದೆ. ಈ ಎಲ್ಲಾ ಕಾರ್ಯವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ತಹಶೀಲ್ದಾರ್ ಯೋಗಾನಂದ ಅವರು ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿ ಕಂದಾಯ ಇಲಾಖೆ ಕರ್ತವ್ಯ ನಿರ್ವಹಿಸಬೇಕು. ಹೊಸ ತಾಲೂಕಿನಲ್ಲಿ ಪ್ರಥಮ ಕಚೇರಿ ಕಂದಾಯ ಇಲಾಖೆಯಿಂದ ಉದ್ಘಾಟನೆಗೊಂಡಿದೆ. ಜನರು ವಿಶ್ವಾಸ ಹೊಂದುವAತೆ ಕಂದಾಯ ಇಲಾಖೆಯ ಸೇವೆಯನ್ನು ಮುಂಚೂಣಿಗೆ ಕೊಂಡೊಯ್ಯಬೇಕು ಎಂದರು.
ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು, ಮುಕೊಂಡ ಶಶಿಸುಬ್ರಮಣಿ, ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಪೊಡಮಾಡ ಸುಖೇಶ್, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯಅಯ್ಯಪ್ಪ, ಪೊನ್ನಪ್ಪಸಂತೆ ಅಧ್ಯಕ್ಷೆ ಚೀಯಕ್‌ಪೂವಂಡ ಪ್ರಭ, ತಾ.ಪಂ. ಮಾಜಿ ಸದಸ್ಯೆ ಸುನಿತಾ, ಆರ್.ಎಂ.ಸಿ. ನಿರ್ದೇಶಕರುಗಳಾದ ಮಾಚಂಗಡ ಸುಜಾಪೂಣಚ್ಚ, ಆದೇಂಗಡ ವಿನುಚಂಗಪ್ಪ, ಬಾಳೆಯ ವಿಜಯಲಕ್ಷಿ÷್ಮ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್, ಪೊನ್ನಂಪೇಟೆ ತಾಲೂಕು ಉಪತಹಶೀಲ್ದಾರ್ ಅಕ್ಕಮ್ಮ, ಶಿರಸ್ತೆದಾರ್ ರಾಧಕೃಷ್ಣ ಸಿ.ಯು, ಕಂದಾಯ ಪರಿವೀಕ್ಷಕರಾದ ಸಮಿವುಲ್ಲಾ ಶರೀಫ್, ಗ್ರಾಮ ಲೆಕ್ಕಿಗ ಚಂದ್ರಪ್ರಸಾದ್, ಸಹಾಯಕ ಸೋಮಯ್ಯ, ಗಣೇಶ್, ಅನಿತಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.