ಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨೪.೧೩ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೦.೦೨ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೨೯೫.೫೧ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೮೬೯.೬೭ ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ ೩೫.೯೦ ಮಿ.ಮೀ. ಕಳೆದ ವರ್ಷ ಇದೇ ದಿನ ೨೩.೨೫ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೮೭೩.೫೯ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೨೭೩.೧೭ ಮಿ.ಮೀ. ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧೩.೬೭ ಮಿ.ಮೀ. ಕಳೆದ ವರ್ಷ ಇದೇ ದಿನ ೩.೩೭ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೦೬೪.೨೦ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೮೦೯.೬೫ ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ ೨೨.೮೩ ಮಿ.ಮೀ. ಕಳೆದ ವರ್ಷ ಇದೇ ದಿನ ೩.೪೩ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೯೪೮.೭೩ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೫೨೬.೨೦ ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ ೪೧.೨೦, ನಾಪೋಕ್ಲು ೨೭.೪೦, ಸಂಪಾಜೆ ೧೭, ಭಾಗಮಂಡಲ ೫೮, ವೀರಾಜಪೇಟೆ ಕಸಬಾ ೧೯.೮೦, ಹುದಿಕೇರಿ ೨೧, ಶ್ರೀಮಂಗಲ ೯, ಪೊನ್ನಂಪೇಟೆ ೧೧.೨೦, ಅಮ್ಮತ್ತಿ ೧೦, ಬಾಳೆಲೆ ೧೧, ಸೋಮವಾರಪೇಟೆ ಕಸಬಾ ೨೩.೮೦, ಶನಿವಾರಸಂತೆ ೧೭, ಶಾಂತಳ್ಳಿ ೫೨.೨೦, ಕೊಡ್ಲಿಪೇಟೆ ೧೦.೪೦, ಕುಶಾಲನಗರ ೧೩.೬೦, ಸುಂಟಿಕೊಪ್ಪ ೨೦ ಮಿ.ಮೀ.ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ ೨೮೫೫ ಅಡಿಗಳು

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨೮೫೫.೩೧ ಅಡಿಗಳು. ಕಳೆದ ವರ್ಷ ಇದೇ ದಿನ ೨೮೫೪.೧೦ ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ ೨೬.೨೦ ಮಿ.ಮೀ., ಇಂದಿನ ನೀರಿನ ಒಳಹರಿವು ೮೩೫೦ ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ ೯,೫೦೦ ಕ್ಯುಸೆಕ್ಸ್. ನಾಲೆಗೆ ೧೫೦ ಕ್ಯುಸೆಕ್ಸ್.