ಗೋಣಿಕೊಪ್ಪಲು, ಜು. ೧೯: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಜ್ಯೂಸ್ ಫ್ಯಾಕ್ಟರಿ ರಸ್ತೆಯಲ್ಲಿ ಮುಂಜಾನೆಯ ವೇಳೆ ಕಸ ಸುರಿಯಲಾಗಿದ್ದು, ರಸ್ತೆಯ ಉದ್ದಕ್ಕೂ ಕಸವನ್ನು ಸುರಿದು ತೆರಳಿದವರು ಯಾರು? ಎಂದು ತಿಳಿಯಲು ಪಂಚಾಯತಿ ಹುಡುಕಾಟ ನಡೆಸಿದೆ.

ಬ್ರಾಂದಿ ಅಂಗಡಿಗಳಲ್ಲಿ ಬಳಕೆ ಮಾಡಿ ಬಿಸಾಡಿದ ಟೆಟ್ರಾ ಪ್ಯಾಕೇಟ್‌ಗಳು ಹೆಚ್ಚಾಗಿ ಕಂಡುಬAದಿದೆ. ಮುಂಜಾನೆ ವೇಳೆ ಇದೇ ರಸ್ತೆಯಲ್ಲಿ ತೆರಳುವ ನಾಗರಿಕರು,ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಕಂಡುಬAತು.

ಇದೇ ರಸ್ತೆಯಲ್ಲಿ ಕೈತೋಡು ಹರಿಯುತ್ತಿದ್ದು ಬಹಳಷ್ಟು ಕಸ ತುಂಬಿಸಿದ ಚೀಲಗಳನ್ನು ಸೇತುವೆಗೆ ಎಸೆದು ತೆರಳುತ್ತಿದ್ದಾರೆ. ಇಂದು ಸಹ ಕಸವನ್ನು ತೋಡಿಗೆ ಎಸೆಯುವ ಭರದಲ್ಲಿ ರಸ್ತೆಯಲ್ಲಿ ವಾಹನ ಬಂದ ಕಾರಣ ಗಾಬರಿಗೊಂಡು ರಸ್ತೆಯಲ್ಲಿ ಬಿಸಾಡಿ ತೆರಳಿದ್ದಾರೆ. ಕಸದ ಮೇಲೆ ವಾಹನಗಳು ಚಲಿಸಿದ ಪರಿಣಾಮ ರಸ್ತೆಯಿಡಿ ಕಸ ಹರಡಿವೆ.

ಇದರಿಂದಾಗಿ ನಾಗರಿಕರು ಅನಿವಾರ್ಯವಾಗಿ ಕಸದ ಮೇಲೆ ನಡೆದುಕೊಂಡು ಓಡಾಡುವ ಪರಿಸ್ಥಿತಿ ಕಂಡುಬAತು.

ಇದೇ ರಸ್ತೆಯಲ್ಲಿ ಕೈತೋಡು ಹರಿಯುತ್ತಿದ್ದು ಬಹಳಷ್ಟು ಕಸ ತುಂಬಿಸಿದ ಚೀಲಗಳನ್ನು ಸೇತುವೆಗೆ ಎಸೆದು ತೆರಳುತ್ತಿದ್ದಾರೆ. ಇಂದು ಸಹ ಕಸವನ್ನು ತೋಡಿಗೆ ಎಸೆಯುವ ಭರದಲ್ಲಿ ರಸ್ತೆಯಲ್ಲಿ ವಾಹನ ಬಂದ ಕಾರಣ ಗಾಬರಿಗೊಂಡು ರಸ್ತೆಯಲ್ಲಿ ಬಿಸಾಡಿ ತೆರಳಿದ್ದಾರೆ. ಕಸದ ಮೇಲೆ ವಾಹನಗಳು ಚಲಿಸಿದ ಪರಿಣಾಮ ರಸ್ತೆಯಿಡಿ ಕಸ ಹರಡಿವೆ.

ಇದರಿಂದಾಗಿ ನಾಗರಿಕರು ಅನಿವಾರ್ಯವಾಗಿ ಕಸದ ಮೇಲೆ ನಡೆದುಕೊಂಡು ಓಡಾಡುವ ಪರಿಸ್ಥಿತಿ ಯಾರೆಂದು ತಿಳಿಯಲು ಪ್ರಯತ್ನ ನಡೆದಿದೆ, ಯಾರಾದರೂ ಕಸವನ್ನು ಎಸೆಯುವುದು ಕಂಡು ಬಂದಲ್ಲಿ ಪಂಚಾಯತಿ ಪಿಡಿಒ ಗಮನಕ್ಕೆ ತರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.