ವೀರಾಜಪೇಟೆ, ಜು. ೧೯: ಕ್ಷÄಲ್ಲಕ ಕಾರಣಕ್ಕೆ ಮಾವನ ಮೇಲೆ ಅಳಿಯ ಹಲ್ಲೆ ನಡೆಸಿ ಮಾವ ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ಸುಣ್ಣದ ಬೀದಿ ಹರಿಕೇರಿ ನಿವಾಸಿ ಹೆಚ್.ಜಿ. ರವಿ (೪೭) ಅಳಿಯನಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.

ಸುಣ್ಣದ ಬೀದಿ ಹರಿಕೇರಿಯ ನಿವಾಸಿ ಎಂ.ಕೆ. ಶ್ರೀನಿವಾಸ್ (೩೨) ಎಂಬಾತನಿಗೆ ಹೆಚ್.ಜಿ ರವಿ ಅವರ ಮಗಳಾದ ಬೇಬಿಯನ್ನು ವಿವಾಹ ಮಾಡಿಕೊಡಲಾಗಿತ್ತು. ದಿನನಿತ್ಯ ಕೂಲಿ ಕಾಯಕದಲ್ಲಿ ತೊಡಗಿದ್ದ ಶ್ರೀನಿವಾಸ ಮನೆಯನ್ನು ನಿರ್ವಹಣೆ ಮಾಡುತ್ತಿದ್ದ. ಆದರೆ ಲಾಕ್‌ಡೌನ್ ಸಂದÀರ್ಭದಲ್ಲಿ ಮನೆಯಲ್ಲಿದ್ದ ಮಾವ ಮತ್ತು ಶ್ರೀನಿವಾಸನಿಗೆ ಕೆಲಸ ಇಲ್ಲದಾಗಿ ದಿನನಿತ್ಯ ಇಬ್ಬರ ಮಧ್ಯೆ ಸಣ್ಣ ಪುಟ್ಟ ಕಲಹಗಳು ನಡೆಯುತಿತ್ತು ಎನ್ನಲಾಗಿದ್ದು, ತಾ. ೧೮ ರಂದು ರಾತ್ರಿ ಮನೆಯಲ್ಲಿದ್ದ ರವಿ ಅವರನ್ನು ಕುರಿತು ಕೆಲಸವಿಲ್ಲದೆ ಸುಮ್ಮನೆ ಕುಳಿತು ತಿನ್ನುತಿದ್ದೀಯ ಎಂಬುದಾಗಿ ನಿಂದಿಸಿ ಶ್ರೀನಿವಾಸ ಜಗಳವಾಡಿದ್ದಾನೆೆ. ಮರದ ರೀಪರ್ ತುಂಡಿನಿAದ ಮಾವ ರವಿಯ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಗಾಯಗೊಂಡ ರವಿ ಅವರನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಳು ರವಿ ನೀಡಿದ ದೂರಿನ ಮೇರೆಗೆ ಶ್ರೀನಿವಾಸನ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶ್ರೀನಿವಾಸನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂದಿನ ಕ್ರಮಕೈಗೊಂಡಿದ್ದಾರೆ.