ಕೂಡಿಗೆ, ಜು. ೧೭ ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಮತ್ತು ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಮುಂಗಾರು ಹಂಗಾಮಿ ಬೇಸಾಯಕ್ಕೆ ಅನುಕೂಲ ವಾಗುವಂತೆ ಅಣೆಕಟ್ಟೆಯ ಕ್ರಸ್ಟ್ ಗೇಟ್‌ಗಳ ಮೂಲಕ ಮುಖ್ಯ ನಾಲೆಗೆ ೧೯೨ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಾದ ಕೊಡಗು ಜಿಲ್ಲೆ ಗಡಿ ಭಾಗ ಶಿರಂಗಾಲ ಸೇರಿದಂತೆ ಅರಕಲಗೂಡು ಮತ್ತು ಪಿರಿಯಾಪಟ್ಟಣದ ಹುಣಸೂರು ತಾಲೂಕು ವ್ಯಾಪ್ತಿಯ ೧.೬೦ ಲಕ್ಷ ಎಕರೆಗಳಷ್ಟು ಪ್ರದೇಶಗಳಿಗೆ ಬೇಸಾಯಕ್ಕೆ ನೀರನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ನಂತರ ಕಣಿವೆ ಸಮೀಪ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ನೀರನ್ನು ಇಂದಿನಿAದ ಹರಿಸಲಾಗಿದೆ. ಈ ವ್ಯಾಪ್ತಿಯ ರೈತರು ಈಗಾಗಲೇ ಉಳುಮೆ ಮಾಡಿ ಸಿದ್ದ ಮಾಡಿದ ಭೂಮಿಯಲ್ಲಿ ಭತ್ತ ಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಅಲ್ಲದೆ ಹುದುಗೂರು ಮಾವಿನಹಳ್ಳ ಮದಲಾಪುರ ಭುವನಗಿರಿ ವ್ಯಾಪ್ತಿಯ ಅನೇಕ ರೈತರು ನಾಟಿ ಕಾರ್ಯಕ್ಕೆ ಭೂಮಿಯನ್ನು ಹದಮಾಡುತ್ತಿದ್ದಾರೆ.