ಕುಶಾಲನಗರ, ಜು. ೧೭: ನೋಂದಾಯಿತ ಕಾರ್ಮಿಕರಿಗೆ ಕುಶಾಲನಗರದಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾಡಳಿತ ಮತ್ತು ಕಾರ್ಮಿಕರ ಇಲಾಖೆಯ ಆಶ್ರಯದಲ್ಲಿ ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಿಟ್ ವಿತರಣೆ ನಡೆಸಿದರು. ಈ ಸಂದರ್ಭ ಮಾತನಾಡಿದ ರಂಜನ್ ಸರ್ಕಾರದ ಮೂಲಕ ಜಿಲ್ಲೆಯ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲು ಕ್ರಮ ಕೈಗೊಂಡಿದ್ದು ಇದರ ಸದುಪಯೋಗವಾಗಲಿ ಎಂದರು. ಸುಮಾರು ೪೯೪ ಮಂದಿಗೆ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಜರ್ಧನ್, ಕುಡಾ ಅಧ್ಯಕ್ಷ ಎಂ.ಎA. ಚರಣ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್, ಪಂಚಾಯಿತಿ ಸದಸ್ಯರಾದ ಕೆ.ಜಿ. ಮನು, ಎಂ.ವಿ. ನಾರಾಯಣ್, ಕುಡಾ ಸದಸ್ಯರಾದ ವಿ.ಡಿ. ಪುಂಡರಿಕಾಕ್ಷ, ವೈಶಾಕ್, ಪ್ರಮುಖರಾದ ಕುಮಾರಪ್ಪ ಮತ್ತಿತರರು ಇದ್ದರು.