ಪೊನ್ನಂಪೇಟೆ, ಜು. ೧೭: ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬ ಪ್ರಮುಖ ಆಶಯದೊಂದಿಗೆ ವಿಶ್ವದಾದ್ಯಂತ ಕಾರ್ಯಾಚರಿ ಸುತ್ತಿರುವ ಜೇಸಿ ಸಂಸ್ಥೆಯ ಸಮಾಜಮುಖಿ ಆಂದೋಲನವನ್ನು ಕೊಡಗಿನಲ್ಲಿ ಮತ್ತಷ್ಟು ವಿಸ್ತರಿಸ ಬೇಕಾಗಿದೆ ಎಂದು ಜೆಸಿಐ ಭಾರತದ ವಲಯ ೧೪ರ ಅಧ್ಯಕ್ಷ ಸೆನೆಟರ್ ಭರತ್ ಎನ್. ಆಚಾರ್ಯ ಹೇಳಿದ್ದಾರೆ.
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ಅವರು ಅಧಿಕೃತ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬಿಟ್ಟಂಗಾಲ ಸಮೀಪದ ಕಂಡAಗಾಲದಲ್ಲಿರುವ ಘಟಕದ ಕಾರ್ಯದರ್ಶಿ ಎ.ಪಿ. ದಿನೇಶ್ ಅವರ ನಿವಾಸದ ಆವರಣದಲ್ಲಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಜೇಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವಮಟ್ಟದಲ್ಲಿ ನೂರಕ್ಕೂ ಹೆಚ್ಚು ವರ್ಷದ ಇತಿಹಾಸವಿರುವ ಜೇಸಿ ಸಂಸ್ಥೆ ೧೯೪೯ ರಲ್ಲಿ ಭಾರತದಲ್ಲಿ ಆರಂಭಗೊAಡಿತು. ೧೯೬೦ರಲ್ಲಿ ಕರ್ನಾಟಕದಲ್ಲಿ ಪ್ರಾರಂಭಗೊAಡ ಈ ಮಹಾ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ವಿಶ್ವದ ಅತಿದೊಡ್ಡ ಯುವ ಕ್ರಿಯಾಶೀಲ ನಾಗರಿಕ ಸಮೂಹದ ನಿರ್ಮಾಣದ ದೃಷ್ಟಿಕೋನ ಹೊಂದಿರುವ ಜಾಗತಿಕ ವಿಶ್ವವಿದ್ಯಾ ಲಯದಂತಿರುವ ಜೇಸಿ ಸಂಸ್ಥೆ, ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆ ಸೃಷ್ಟಿಸಿ ಸದೃಢ ಗೊಳಿಸಲು ಅವರಿಗೆ ಅಭಿವೃದ್ಧಿ ಅವಕಾಶಗಳನ್ನು ಒದಗಿಸುವ ಪ್ರಮುಖ ಧ್ಯೇಯ ಹೊಂದಿದೆ.
ಯುವಜನರ ಮತ್ತು ಉದ್ಯಮಶೀಲರ ವಿಶ್ವವ್ಯಾಪಿ ಒಕ್ಕೂಟವಾಗಿರುವ ಈ ಸಂಸ್ಥೆ ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂಬುದನ್ನು ಬಲವಾಗಿ ನಂಬಿದೆ ಎಂದು ಅಭಿಪ್ರಾಯಪಟ್ಟ ಭರತ್ ಆಚಾರ್ಯ ಅವರು, ನಿರಂತರ ತರಬೇತಿಯಿಂದ ಯುವಸಮೂಹದಲ್ಲಿ ಬಹುದೊಡ್ಡ ಬದಲಾವಣೆ ತರಲು ಸಾಧ್ಯವಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಏಕೈಕ ಸ್ವಯಂಸೇವಾ ಸಂಸ್ಥೆಯಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ವಲಯದ ‘ಎ' ಪ್ರಾಂತ್ಯದ ವಲಯ ಉಪಾಧ್ಯಕ್ಷ ಬಾಬು ಎಂ. ಗೌಡ ಅವರು ಮಾತನಾಡಿ, ಯುವ ಸಮೂಹವನ್ನು ಮತ್ತಷ್ಟು ಸದೃಢಗೊಳಿಸಿ ಅವರನ್ನು ನಾಯಕರನ್ನಾಗಿ ರೂಪಿಸುವಲ್ಲಿ ಜೇಸಿಸ್‌ಗೆ ಸರಿಸಾಟಿಯಾದ ಸಂಸ್ಥೆ ಮತ್ತೊಂದಿಲ್ಲ.
ಯುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಜಿಲ್ಲೆಯ ಪ್ರತಿ ಪ್ರದೇಶಗಳಲ್ಲಿ ಜೇಸಿ ಘಟಕಗಳು ಆರಂಭವಾಗಬೇಕಿದೆ ಎಂದು ಹೇಳಿದರು.
ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಫೀಕ್ ತೂಚಮಕೇರಿ, ಪೂರ್ವ ವಲಯ ಉಪಾಧ್ಯಕ್ಷ ಆನಂದ್, ಪೂರ್ವ ವಲಯಾಧಿಕಾರಿ ಬಿ. ಈ. ಕಿರಣ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ವನಿತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಘಟಕದ ನಿಕಟಪೂರ್ವ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ಉಪಸ್ಥಿತರಿದ್ದರು.
ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಜೇಸಿವಾಣಿ ವಾಚಿಸಿದರು. ನಿರ್ದೇಶಕ ಡಾ. ಬಿ.ಎಂ. ಗಣೇಶ್ ವಲಯಾ ಧ್ಯಕ್ಷರನ್ನು ಪರಿಚಯಿಸಿದರು. ವನಿತ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಎ.ಪಿ. ದಿನೇಶ್ ಕುಮಾರ್ ವಂದಿಸಿದರು.