ಕಡಂಗ, ಜು. ೧೭: ಕೊಡಗು ಜಿಲ್ಲೆಯ ಅನ್ವಾರುಲ್ ಹುದಾ ವಿದ್ಯಾಸಂಸ್ಥೆ ಸಂತತಿಗಳ ಸಂಘಟನೆ ಅನ್ವಾರಿ ವಿಂಗ್ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಸಯ್ಯಿದ್ ಸಮೀಹ್ ಅನ್ವಾರಿ ಯವರ ದುಆದೊಂದಿಗೆ ಚಾಲನೆಗೊಂಡ ಸಭೆಯ ಅಧ್ಯಕ್ಷತೆಯನ್ನು ಖಮರುದ್ದೀನ್ ಅನ್ವಾರಿ ಅಸ್ಸಖಾಫಿಯವರು ವಹಿಸಿದರು. ಸಂಸ್ಥೆಯ ಸಾರಥಿ ಶೈಖುನಾ ಅಹ್ಸನೀ ಉಸ್ತಾದರು ಉದ್ಘಾಟಿಸಿದರೆ, ಸಂಸ್ಥೆಯ ಪ್ರಾಧ್ಯಾಪಕರುಗಳಾದ ಶೈಖುನಾ ಅಬ್ದುರ್ರಶೀದ್ ಸಅದಿ ಉಸ್ತಾದ್, ಮೌಲಾನಾ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್, ಯಾಕೂಬ್ ಮಾಸ್ಟರ್ ಅನ್ವಾರಿಗಳಿಗೆ ಹಿತವಚನ ನೀಡಿದರು. ನಂತರ ಶೈಖುನಾ ಅಹ್ಸನೀ ಉಸ್ತಾದರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಯ್ಯಿದ್ ಸಮೀಹ್ ಅನ್ವಾರೀ ಅಲ್ ಅಹ್ಸನಿ ಎಮ್ಮೆಮಾಡು, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಶಿದ್ ಅನ್ವಾರಿ ಅಲ್ ಅಹ್ಸನಿ ಅಯ್ಯಂಗೇರಿ, ಕೋಶಾಧಿಕಾರಿಯಾಗಿ ಮಿರ್ಷಾದ್ ಅನ್ವಾರಿ ಅಸ್ಸಖಾಫಿ ಪೊನ್ನಂಪೇಟೆ ಉಪಾಧ್ಯಕ್ಷರುಗಳಾಗಿ ಶಾಫಿ ಅನ್ವಾರಿ ಅಸ್ಸಖಾಫಿ, ಜುನೈದ್ ಅನ್ವಾರಿ ಅಲ್ ಅಹ್ಸನಿ ಜೊತೆ ಕಾರ್ಯದರ್ಶಿಯಾಗಿ ಖಮರುದ್ದೀನ್ ಅನ್ವಾರಿ ಅಲ್ ಅಹ್ಸನಿ, ಹಂಶಾದ್ ಅನ್ವಾರಿ ಸಅದಿ ಅಲ್ ಅಫ್ಝಲಿ ಹಾಗೂ ಸದಸ್ಯರಾಗಿ ಕಮರುದ್ದೀನ್ ಅನ್ವಾರಿ, ಆಸಿಫ್ ಅನ್ವಾರಿ, ಅಪ್ಸರ್ ಅನ್ವಾರಿ ಶಿಹಾಬ್ ಅನ್ವಾರಿ, ಶಹೀರ್ ಅನ್ವಾರಿ, ಆಸಫ್ ಅನ್ವಾರಿ, ಶರೀಫ್ ಅನ್ವಾರಿ, ಝೈನುದ್ದೀನ್ ಅನ್ವಾರಿ ಅವರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನರಾದ ಅನ್ವಾರುಲ್ ಹಿತೈಷಿಗಳು ಹಾಗೂ ಅವರ ಸಂಬAಧಿಕರುಗಳ ಹೆಸರಿನಲ್ಲಿ ತಹ್ಲೀಲ್ ಹಾಗೂ ಪ್ರತ್ಯೇಕ ದುಆ ನಡೆಸಲಾಯಿತು. ರಾಶಿದ್ ಅನ್ವಾರಿ ಸ್ವಾಗತಿಸಿ, ಸಮೀಹ್ ಅನ್ವಾರಿ ವಂದಿಸಿದರು. - ನೌಫಲ್, ಕಡಂಗ