ಮಡಿಕೇರಿ, ಜು. ೧೭: ಮಡಿಕೇರಿಯಿಂದ ಕೇರಳದ ಕಣ್ಣೂರು ಏರ್‌ಪೋರ್ಟ್ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ ಸಿದ್ಧಗೊಳ್ಳುತ್ತಿದೆ.

ಕಣ್ಣೂರಿನಿಂದ ಚೊವ್ವಾ, ಮಟ್ಟನ್ನೂರು, ಕೂಟುಪೊಳೆ, ವಳವುಪಾರ, ಮಾಕುಟ್ಟ, ವೀರಾಜಪೇಟೆ ಮಾರ್ಗವಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯವರೆಗಿನ ರಸ್ತೆಯನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಮಾಡುವ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭ ಭಾರತ್‌ಮಾತಾ ಯೋಜನೆಯಡಿ ಈ ರಸ್ತೆಯನ್ನು ‘ಸ್ಟೆçಚ್ ನ್ಯಾಷನಲ್ ಹೈವೆ’ ಆಗಿ ಪರಿವರ್ತಿಸಲು ಕೇಂದ್ರದ ಸಚಿವರು ಅನುಮತಿಸಿ ದರೆನ್ನಲಾಗಿದೆ. ಇದರೊಂದಿಗೆ ಕೇರಳದ ಇತರ ೧೧ ರಸ್ತೆಗಳಿಗೂ ರಾಷ್ಟಿçÃಯ ಹೆದ್ದಾರಿ ಸೌಲಭ್ಯ ಸಿಗಲಿದೆ.